‘ಹೃದಯಕ್ಕಾದ ಗಾಯ ಇನ್ನು ವಾಸಿಯಾಗಿಲ್ಲ’- ಸುಶಾಂತ್ ಸಿಂಗ್ ಪ್ರೇಯಸಿಯ ಎಮೋಷನಲ್ ಪೋಸ್ಟ್

Public TV
3 Min Read
rhea chakraborty

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವನ್ನಪ್ಪಿ ಇಂದಿಗೆ (ಜುಲೈ 14) 1 ತಿಂಗಳು ಕಳೆದಿದ್ದು, ಈ ಸಂದರ್ಭದಲ್ಲಿ ಆತನ ಪ್ರೇಯಸಿ ರಿಯಾ ಚಕ್ರವರ್ತಿ ಭಾವೋದ್ವೇಗದಿಂದ ಪತ್ರವೊಂದನ್ನು ಬರೆದಿದ್ದಾರೆ.

ಸುಶಾಂತ್ ಸಿಂಗ್‍ರೊಂದಿಗೆ ಇರುವ ಫೋಟೋವನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿರುವ ರಿಯಾ, ಪ್ರೇಮಿಯೊಂದಿಗೆ ಕಳೆದ ಕ್ಷಣಗಳನನ್ನು ನೆನಪು ಮಾಡಿಕೊಂಡಿದ್ದಾರೆ.

sushanth singh

ಪೋಸ್ಟ್ ನಲ್ಲೇನಿದೆ?
‘ನೀನು ಇಲ್ಲ ಎಂದು ತಿಳಿದ ಕ್ಷಣದಿಂದ ಇದುವರೆಗೂ ನನ್ನ ಭಾವನೆಗಳನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಹೃದಯಕ್ಕಾದ ಗಾಯ ಇಂದಿಗೂ ವಾಸಿಯಾಗಿಲ್ಲ. ಪ್ರೀತಿಯ ಮೇಲೆ ನಂಬಿಕೆ ಬರುವಂತೆ ಮಾಡಿ, ಜೀವನ ಪಾಠಗಳನ್ನು ಹೇಳಿದ ವ್ಯಕ್ತಿ ನೀನು.

ಈಗ ನೀನು ಮತ್ತೊಂದು ಲೋಕದಲ್ಲಿ ತುಂಬಾ ಶಾಂತಿಯಿಂದ ಇದ್ದೀಯಾ ಎಂದು ನನಗೆ ತಿಳಿದಿದೆ. ಚಂದ್ರ, ನಕ್ಷತ್ರಗಳು, ಗ್ಯಾಲಾಕ್ಸಿ ಶ್ರೇಷ್ಠ ಭೌತಶಾಸ್ತ್ರಜ್ಞನನ್ನು ತೆರೆದ ಬಾವುಗಳಿಂದ ಸ್ವಾಗತಿಸಿವೆ ಎಂದುಕೊಳ್ಳುತ್ತೇನೆ. ನೀನು ಸುಂದರ ವ್ಯಕ್ತಿಯಾಗಲು ನಿನ್ನಲ್ಲಿ ಎಲ್ಲ ಗುಣಗಳು ಇದ್ದವು. ಜಗತ್ತು ಕಂಡ ಅತಿ ದೊಡ್ಡ ಅದ್ಭುತ ನೀನು.

 

View this post on Instagram

 

Still struggling to face my emotions.. an irreparable numbness in my heart . You are the one who made me believe in love, the power of it . You taught me how a simple mathematical equation can decipher the meaning of life and I promise you that I learnt from you every day. I will never come to terms with you not being here anymore. I know you’re in a much more peaceful place now. The moon, the stars, the galaxies would’ve welcomed “the greatest physicist “with open arms . Full of empathy and joy, you could lighten up a shooting star – now, you are one . I will wait for you my shooting star and make a wish to bring you back to me. You were everything a beautiful person could be, the greatest wonder that the world has seen . My words are incapable of expressing the love we have and I guess you truly meant it when you said it is beyond both of us. You loved everything with an open heart, and now you’ve shown me that our love is indeed exponential. Be in peace Sushi. 30 days of losing you but a lifetime of loving you…. Eternally connected To infinity and beyond

A post shared by Rhea Chakraborty (@rhea_chakraborty) on

ಎಲ್ಲರನ್ನು ನೀನು ಮುಕ್ತ ಮನಸ್ಸಿನಿಂದ ಪ್ರೀತಿಸುತ್ತಿದ್ದೆ. ಈಗ ನಮ್ಮ ಪ್ರೀತಿ ಹೆಚ್ಚಾಗುತ್ತಿದೆ. ನಿನ್ನನ್ನು ಕಳೆದುಕೊಂಡು 20 ದಿನಗಳಾಗಿದ್ದು, ಆದರೆ ಜೀವನ ಕೊನೆವರೆಗೂ ಪ್ರೀತಿಸುತ್ತೇನೆ’ ಎಂದು ರಿಯಾ ಚಕ್ರವರ್ತಿ ಬರೆದುಕೊಂಡಿದ್ದಾರೆ.

ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಕೆಲ ಸಮಯದ ಹಿಂದೆ ನಟಿ ರಿಯಾ ಚಕ್ರವರ್ತಿ ಹೆಸರು ಅವರೊಂದಿಗೆ ಕೇಳಿ ಬಂದಿತ್ತು. ಖಾಸಗಿ ಕಾರ್ಯಕ್ರಮಗಳು ಸೇರಿದಂತೆ ಹಲವೆಡೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಅಲ್ಲದೇ ಸುಶಾಂತ್ ಮದುವೆ ಆಗ್ತಿದ್ದಾರೆ ಅಂತಾ ನ್ಯೂಸ್ ಹರಿದಾಡಿದ್ದುಂಟು. ಈಗತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ರಿಯಾ, ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಹೆಚ್ಚು ಆಸಕ್ತಿ ತೋರಿದ್ದರು. ಹಾಗಾಗಿ ಮದುವೆಗೆ ಹಿಂದೇಟು ಹಾಕಿದ್ದರು ಎನ್ನಲಾಗಿತ್ತು.

sushanth 1

ಇತ್ತ ಸುಶಾಂತ್ ಸಿಂಗ್ ಆತ್ಮಹತ್ಯೆ ಕುರಿತು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಆತನ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಐವರು ಸದಸ್ಯರ ಪೊಲೀಸ್ ಅಧಿಕಾರುಗಳ ತಂಡ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದುವರೆಗೂ 35ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿದ್ದು, ಸಮಗ್ರ ತನಿಖಾ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ.

Rhea Chakraborty and sushant singh

Share This Article
Leave a Comment

Leave a Reply

Your email address will not be published. Required fields are marked *