ಹುಬ್ಬಳ್ಳಿ: ಬಹುನಿರೀಕ್ಷಿತ ಪೊಗರು ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಹುಬ್ಬಳ್ಳಿಯ ನಾಲ್ಕು ಚಿತ್ರಮಂದಿರಗಳಲ್ಲಿ ಮೊದಲ ಪ್ರದರ್ಶನ ಹೌಸ್ ಫುಲ್ ಆಗಿದೆ. ಈಗಾಗಲೇ ಮೊದಲ ಪ್ರದರ್ಶನದ ಟಿಕೇಟ್ ಸೋಲ್ಡ್ ಔಟ್ ಆಗಿದ್ದು, ಪೇಕ್ಷಕರು 2 ಆಟದ ಟಿಕೆಟ್‍ಗಾಗಿ ಮುಗಿಬಿದ್ದು ಕ್ಯೂ ನಿಂತಿದ್ದಾರೆ.
ಪೊಗರು ಚಿತ್ರ ಪ್ರದರ್ಶನ ಆರಂಭ ಕ್ಕೂ ಮುನ್ನ ಸಂಭ್ರಮಾಚರಣೆ ಪ್ರಾರಂಭವಾಗಿತ್ತು. ಹುಬ್ಬಳ್ಳಿಯ ಸುಧಾ, ಅಪ್ಸರಾ ಚಿತ್ರಮಂದಿರದ ಮುಂದೆ ಅಭಿಮಾನಿಗಳು ಸಂಭ್ರಮದಿಂದ ಪಟಾಕಿ ಸಿಡಿಸಿ, ಸಿಹಿ ಹಚ್ಚಿ ಸಂಭ್ರಮಿಸಿದ್ದಾರೆ. ಚಿತ್ರದಲ್ಲಿ ಖಳನಟನಾಗಿ ಅಭಿನಯಿಸಿರುವ ಹುಬ್ಬಳ್ಳಿಯ ನಟ ಕೃಷ್ಣಾ ಸಹ ಚಿತ್ರಮಂದಿರಕ್ಕೆ ಭೇಟಿ ನೀಡಿ ಪೇಕ್ಷಕರ ಜೊತೆ ಸಂಭ್ರಮಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಈಗಾಗಲೇ ಮೊದಲ ಪ್ರದರ್ಶನದ ಟಿಕೇಟ್ ಸೋಲ್ಡ್ ಔಟ್ ಆಗಿದ್ದು. ಪೇಕ್ಷಕರು 2 ಆಟದ ಟಿಕೆಟ್‍ಗಾಗಿ ಮುಗಿಬಿದ್ದು ಕ್ಯೂ ನಿಂತಿದ್ದಾರೆ. ಮೊದಲ ಪ್ರದರ್ಶನ ಮುಂಜಾನೆ 9 ಗಂಟೆಗೆ ಆರಂಭವಾಗಿದೆ. ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಚಿತ್ರ ವೀಕ್ಷಣೆಗಾಗಿ ಪೇಕ್ಷಕರು ಹೇಗೆ ಕಾತರಾಗಿದ್ದಾರೆ. ಟಿಕೆಟ್‍ಗೆ ಕ್ಯೂ ನಿಂತಿದ್ದಾರೆ.