ಮಡಿಕೇರಿ: ಇಂಡೋ-ಚೀನಾ ಗಡಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂಪರ ಸಂಘಟನೆ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜನರಲ್ ತಿಮ್ಮಯ್ಯ ಸರ್ಕಲ್‍ನಲ್ಲಿ ದೇಶ ಅಭಿಮಾನಿಗಳು ಪ್ರತಿಭಟನೆ ಮಾಡಿದರು. ವಿನಃ ಕಾರಣ ಗಡಿಯಲ್ಲಿ ತಗಾದೆ ತೆಗೆದು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿದೆ ಎಂದು ಚೀನಾ ವಸ್ತುಗಳನ್ನು ಸುಟ್ಟು ಕುತಂತ್ರಿ ಚೀನಾ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಜನರಲ್ ತಿಮ್ಮಯ್ಯ ವೃತ್ತದಿಂದ ಯುದ್ಧ ಸ್ಮಾರಕದ ಬಳಿ ಮೆರವಣಿಗೆಯಲ್ಲಿ ಹೊರಟ ಸಂಘಟನೆಯ ಪ್ರಮುಖರು ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.
Advertisement
ಚೀನಾ, ನೇಪಾಳ ಹಾಗೂ ಪಾಕಿಸ್ತಾನ ಮೊದಲಿನಿಂದಲೂ ಗಡಿ ವಿಚಾರಕ್ಕೆ ತಕರಾರು ತೆಗೆಯುತ್ತಿವೆ. ಪರಿಸ್ಥಿತಿಯ ಲಾಭ ಪಡೆದುಕೊಂಡು ದೇಶದ ಮೇಲೆ ಯುದ್ಧ ಸಾರಲು ಅವಣಿಸುತ್ತಿವೆ. ದೇಶದ ಭದ್ರತೆಯ ವಿಷಯಕ್ಕೆ ಬಂದಾಗ ಭಾರತೀಯರು ಸಂಘಟಿತ ಹೋರಾಟ ಮಾಡುತ್ತೇವೆ. ಭಾರತದ ಸಾರ್ವಭೌಮತೆ ಹಾಗೂ ಸೈನಿಕ ಸಾಮರ್ಥ್ಯ ಹಿಂದಿನಂತೆ ಇಲ್ಲ. 1964ರ ಭಾರತ ಬಹಳ ಬದಲಾಗಿದೆ. ದೇಶದ ಭದ್ರತೆಗೆ ಧಕ್ಕೆ ಎದುರಾದರೆ ಎಂದಿಗೂ ಸಹಿಸುವುದಿಲ್ಲ ಎಂದು ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.