ಮೇಕಪ್ ಮಾಡುವುದು ಬಹಳ ಸುಲಭ. ಮೇಕಪ್ ಮಾಡಿಕೊಳ್ಳಲು 15 ರಿಂದ 20 ನಿಮಿಷ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಝೂಮ್ ಮೀಟಿಂಗ್, ಕ್ಲೈಂಟ್ ಕರೆಗಳನ್ನು ಸ್ವೀಕರಿಸುವ ವೇಳೆ ತಕ್ಷಣಕ್ಕೆ ರೆಡಿಯಾಗಬೇಕಾಗುತ್ತದೆ. ಆಗ ತಯಾರಾಗಲು ನಮಗೆ ಅನೇಕ ಕೈಗಳ ಸಹಾಯ ಬೇಕಾಗುತ್ತದೆ. ಆದರೆ ಲಿಪ್‍ಸ್ಟಿಕ್, ಐ ಮೇಕಪ್ ನಿಮಗೆ ಬಹಳಷ್ಟು ಹೊಳಪು ನೀಡುತ್ತದೆ. ನೀವು ತಕ್ಷಣಕ್ಕೆ ರೆಡಿಯಾಗಬೇಕೆಂದರೆ ಈ 5 ಬ್ಯೂಟಿ ಪ್ರೊಡಕ್ಟ್‌ಗಳನ್ನು ನಿಮ್ಮ ಮೇಕಪ್ ಕಿಟ್‍ನಲ್ಲಿ ಎಲ್ಲೆ ಹೋದರೂ ತೆಗೆದುಕೊಂಡು ಹೋಗುವುದು ಉತ್ತಮ. ಏಕೆಂದರೆ ಈ ಬ್ಯೂಟಿ ಪ್ರೊಡಕ್ಟ್‌ಗಳು ನಿಮ್ಮ ಮುಖಕ್ಕೆ ತಕ್ಷಣ ಬದಲಾವಣೆ ನೀಡುತ್ತದೆ.
Advertisement
ಸನ್ ಸ್ಕ್ರೀನ್ ಸ್ಪೇ
ಸನ್ ಸ್ಕ್ರೀನ್ ಸ್ಪ್ರೇ ತ್ವಚೆಗೆ ಬಹಳ ಮುಖ್ಯ. ಇದು ನಮ್ಮ ಮುಖದಲ್ಲಿನ ವೈಟ್ ಪ್ಯಾಚೇಸ್‍ಗಳನ್ನು ತಡೆಗಟ್ಟುತ್ತದೆ.
Advertisement
Advertisement
ಕಣ್ಣಿನ ಪೆನ್ಸಿಲ್
ಸೌಂದರ್ಯ ಎಂಬುದು ಕಣ್ಣಿನಲ್ಲಿ ಅಡಗಿರುತ್ತದೆ. ಅದರಲ್ಲಿಯೂ ಪೆನ್ಸಿಲ್ ಮೂಲಕ ಕಣ್ಣಿಗೆ ಬಣ್ಣ ಹಚ್ಚುವುದರಿಂದ ಅದು ನಿಮ್ಮ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
Advertisement
ಲಿಪ್‍ಸ್ಟಿಕ್
ತುಟಿಗಳಿಗೆ ಲಿಪ್‍ಸ್ಟಿಕ್ ಹಚ್ಚುವುದರಿಂದ ನಿಮಗೆ ಅದು ಬೋಲ್ಡ್ ಲುಕ್ ನೀಡುತ್ತದೆ. ಆದರೆ ಲಿಪ್‍ಸ್ಟಿಕ್ ಬಳಸುವ ಮುನ್ನ ನಿಮ್ಮ ತುಟಿಗೆ ಸೂಟ್ ಆಗುವಂತಹ ಬಣ್ಣ ಯಾವುದು ಎಂದು ಅರಿತು ಹಾಕಿಕೊಳ್ಳುವುದು ಉತ್ತಮ. ಲಿಪ್‍ಸ್ಟಿಕ್ ನಿಮ್ಮ ತುಟಿಗೆ ಬಣ್ಣ ನೀಡುವುದರ ಮೂಲಕ ಸುಂದರವಾಗಿಸುತ್ತದೆ.
ಮಿಲ್ಕಿ- ಲೋಷನ್
ಹಾಲಿನ ಮೂಲಕ ತಯಾರಿಸಿರುವ ಈ ಲೋಷನ್ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಇದು ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿ ಮುಖ ಹಾಗೂ ದೇಹ ಎರಡಕ್ಕೂ ಒಂದೇ ಬಣ್ಣ ನೀಡುತ್ತದೆ.
ಹೇರ್ ಬ್ರಶ್
ಹೇರ್ ಬ್ರಶ್‍ನನ್ನು ನಿಮ್ಮೊಂದಿಗೆ ಯಾವಾಗಲೂ ಕೊಂಡೊಯ್ಯಿರಿ ಇದು ನಿಮಗೆ ಎಂದಿಗದರೂ ಉಪಯೋಗಕ್ಕೆ ಬರಬಹುದು. ನೀವು ತುಂಬಾ ಒತ್ತಡದಲ್ಲಿರುವಾಗ ನಿಮ್ಮ ಕೂದಲನ್ನು ಬಾಚಿಕೊಳ್ಳುವುದರಿಂದ ನಿಮ್ಮ ನೆತ್ತಿಯ ಮೇಲಿನ ರಕ್ತ ಪರಿಚಲನೆಯನ್ನು ಇದು ಸುಧಾರಿಸುತ್ತದೆ ಹಾಗೂ ಒತ್ತಡ ಕಡಿಮೆ ಗೊಳಿಸುತ್ತದೆ.