ಬಿಗ್ಬಾಸ್ ಇತಿಹಾಸಲ್ಲಿ ಮೊದಲ ಬಾರಿ ಇಷ್ಟುದಿನಗಳ ಕಾಲ ಒಬ್ಬ ಮಹಿಳಾ ಸ್ಪರ್ಧಿಯು ಕ್ಯಾಪ್ಟನ್ ಪಟ್ಟವನ್ನು ಪಡೆದಿಲ್ಲ. ಈ ವಿಚಾರವಾಗಿ ಮಹಿಳಾ ಸ್ಪರ್ಧಿಗಳಲ್ಲಿ ಕೊಂಚ ಮನಸ್ತಾಪವಾಗಿದೆ.
Advertisement
ಮೊದಲ ಇನ್ನಿಂಗ್ಸ್‌ನಲ್ಲಿ ಬಿಗ್‍ಬಾಸ್ ಮನೆಯ ಮಹಿಳಾ ಸ್ಪರ್ಧಿಗಳು ಯಾರು ಕ್ಯಾಪ್ಟನ್ ಆಗಿರಲಿಲ್ಲ. ಆದರೆ ಸೆಕೆಂಡ್ ಇನ್ನಿಂಗ್ಸ್‌ನ ಮೊದಲ ವಾರವೇ ಕ್ಯಾಪ್ಟನ್ಸ್ ಟಾಸ್ಕ್ ಕೂಡ ಕೈ ತಪ್ಪಿ ಹೋಗಿದೆ. ಮೊದಲ ವಾರದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ನಡೆದಿದೆ. ಈ ಟಾಸ್ಕ್ನಲ್ಲಿ ಮತ್ತೆ ಹುಡುಗರೇ ಮೇಲುಗೈ ಸಾಧಿಸಿದ್ದಾರೆ. ಈ ಸಲವೂ ಯಾವೊಬ್ಬ ಹುಡುಗಿಯೂ ಕ್ಯಾಪ್ಟನ್ ಆಗಿ ಆಯ್ಕೆಯಾಗಿಲ್ಲ. ಮಂಜು ಪಾವಗಡ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
Advertisement
Advertisement
ಕ್ಯಾಪ್ಟನ್ಸಿ ಟಾಸ್ಕ್ಗೆ ಚಾಲೆಂಜರ್ಸ್ ತಂಡದವರು ಆಯ್ಕೆಯಾಗಿದ್ದರು. ದಿವ್ಯಾ ಉರುಡುಗ, ಪ್ರಿಯಾಂಕ, ಮಂಜು, ಅರವಿಂದ್, ಶಮಂತ್, ರಘು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗವಹಿಸಿದ್ದರು. ಖಾಲಿ ಗ್ಲಾಸ್, ಮೊಟ್ಟೆಯನ್ನು ಇರಿಸಲಾಗಿತ್ತು. ಮೊಟ್ಟೆ ಇರುವ ಗ್ಲಾಸ್ ಒಡೆದರೆ ಔಟ್, ಬರೀ ಗ್ಲಾಸನ್ನು ಮಾತ್ರ ಕೈಯಿಂದ ಒಡೆಯಬೇಕು ಎನ್ನುವುದು ಈ ಟಾಸ್ಕ್ ನಿಯಮವಾಗಿತ್ತು. ಈ ಆಟದಲ್ಲಿ ಮಹಿಳಾ ಮಣಿಗಳಿಗೆ ಲಕ್ ಕೈ ಕೊಟ್ಟಿದೆ. ಮಂಜು ಕ್ಯಾಪ್ಟನ್ ಆಗಿದ್ದಾರೆ.
Advertisement
38 ಗಂಟೆಗೂ ಹೆಚ್ಚಿನ ಸಮಯ ಕುರ್ಚಿ ಪಾಲಿಟಿಕ್ ಟಾಸ್ಕ್ನಲ್ಲಿ ಭಾಗಿಯಾಗುವ ಮೂಲಕ ಮಂಜು ಪಾವಗಡ ಗೆಲ್ಲುವ ಮೂಲಕ ಪ್ರಶಾಂತ್ ಸಂಬರಗಿ ಅವರನ್ನು ಸೋಲಿಸಿದ್ದಾರೆ. ನಂತರ ಚಾಲೆಂಜರ್ಸ್ ತಂಡದ ಕಡೆಯಿಂದ ನಡೆದ ಮೊಟ್ಟೆ ಹಾಗೂ ಗ್ಲಾಸ್ ಟಾಸ್ಕ್ನಲ್ಲಿ ಮಂಜು ಗೆಲ್ಲುವ ಮೂಲಕ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆದ್ದಿದ್ದಾರೆ. ಹೀಗಾಗಿ ಈ ಬಾರಿಯೂ ಕ್ಯಾಪ್ಟನ್ ಪಟ್ಟ ಹುಡುಗರ ಪಾಲಾಗಿದೆ.
ಈ ಕುರಿತಾಗಿ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕೇಳಿದಾಗ ಮಹಿಳಾ ಮಣಿಗಳು ಸ್ಪರ್ಧೆ ಮಾಡುತ್ತಿದ್ದೇವೆ, ಆದರೆ ಲಕ್ ಇಲ್ಲ ಎಂದು ಎನ್ನಿಸುತ್ತದೆ ಎಂದು ಹಾರಿಕೆ ಉತ್ತರವನ್ನು ಕೊಟ್ಟಿದ್ದಾರೆ. ಮುಂದಿನ ಬಾರಿ ಕ್ಯಾಪ್ಟನ್ ಪಟ್ಟಕ್ಕೆ ಪ್ರಯತ್ನಿಸಿ, ನಾವು ಪ್ರಯತ್ನಿಸಿದ್ದೇವೆ ಸಾಧ್ಯವಾಗಿಲ್ಲ ಎನ್ನುವುದು ಸಮಂಜಸವಲ್ಲ ಎಂದು ಕಿವಿಮಾತು ಹೇಳಿ ಸುದೀಪ್ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ. ಮುಂದಿನವಾರವಾದರೂ ಮಹಿಳಾ ಸ್ಪರ್ಧಿಗಳು ಕ್ಯಾಪ್ಟನ್ ಆಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.