ದೊಡ್ಮನೆಗೆ ಎಂಟ್ರಿ ಕೊಟ್ಟ ಕೆಲವು ಬ್ಯಾಚುಲರ್ ಹುಡುಗರಲ್ಲಿ ಬ್ರೋಗೌಡ ಕೂಡ ಒಬ್ಬರು. ಮೊನ್ನೆ ಟಾಸ್ಕ್ ನಲ್ಲಿ ಕಿರುಚಾಡುತ್ತಾ, ಕಿತ್ತಾಡಿ, ಗುದ್ದಾಡಿಕೊಂಡಿದ್ದ ಬಿಗ್‍ಬಾಸ್ ಮಂದಿ ನಿನ್ನೆ ಹಾಸ್ಯದ ಹೊನಲಿನಲ್ಲಿ ತೇಲಿದ್ದಾರೆ.
ಬಿಗ್‍ಬಾಸ್ ಮನೆಗೆ ಬಂದಾಗನಿಂದ ಮಗುವಿನಂತೆ ಎಲ್ಲರೊಂದಿಗೆ ಬೆರೆತು, ಸಿರಿಯಸ್ ಸಮಯದಲ್ಲಿ ಕೂಡ ಹಾಸ್ಯ ಚಟಾಕಿ ಹರಿಸುವ ನಟಿ ಶುಭಾ ಪೂಂಜಾ ನಿನ್ನೆ ಬ್ರೋ ಗೌಡರ ಕಾಲೆಳೆದಿದ್ದಾರೆ. ನಿನ್ನೆ ಮನೆ ಮಂದಿಯೆಲ್ಲಾ ಒಟ್ಟಾಗಿ ಲೀವಿಂಗ್ ಏರಿಯಾದಲ್ಲಿ ಟೈಪಾಸ್ ಮಾಡುತ್ತಿದ್ದ ವೇಳೆ ಮಂಜು ಸುಮ್ ಸುಮ್ ನೇ ನಗ್ತಾಳೆ ಎಂದು ದಿವ್ಯಾ ಸುರೇಶ್ ನೋಡುತ್ತಾ ಹಾಡು ಹೇಳಿದ್ದಾರೆ. ಇದಕ್ಕೆ ದಿವ್ಯಾ ಮುಖ ತಿರುಗಿಸಿಕೊಂಡು ಬೇರೆ ಕಡೆ ನೋಡುತ್ತಾರೆ. ಅದಕ್ಕೆ ಮಂಜು ನಾನು ಹೇಳಿದೆ ಅಲ್ಲವಾ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಅವಳ ಕೈನಲ್ಲಿ ಆಗುವುದಿಲ್ಲ ಎಂದು ಹೇಳುತ್ತಾರೆ.
ರಾಜೀವ್, ಬ್ರೋ ಗೌಡ ಬರುವವರೆಗೂ ಹೀಗೆ ಹಾಡು ಹೇಳು ಎನ್ನುತ್ತಾರೆ. ಈ ವೇಳೆ ಶುಭಾ ಅವನು ಸುಮ್ನೆ ರೆಡಿಯಾಗಿ ಬೇರೆಯವರಿಗೆ ಹೇಳುವುದಾಯ್ತು. ಇಲ್ಲಿಯವರೆಗೂ ಒಂದು ಹುಡುಗಿಯನ್ನು ಪಟಾಯಿಸುವುದಕ್ಕೆ ಆಗಲಿಲ್ಲ. ಹೊರಗಡೆ ನೋಡಿದರೆ ನನಗೆ ಇಷ್ಟು ಜನ ಹುಡುಗಿಯರು ಬಿದ್ದಿದ್ದರು, ಅಷ್ಟು ಜನ ಹುಡುಗಿಯರು ಬಿದ್ದಿದ್ದಾರೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಾನೆ. ಹೊರಗಡೆ 22 ಜನ ಹುಡುಗಿಯರು ಬಿದ್ದಿರುವ ಅವನಿಗೆ ಬಿಗ್‍ಬಾಸ್ ಮನೆಯಲ್ಲಿ ಒಬ್ಬರನ್ನು ಕೂಡ ಬೀಳಿಸಲು ಆಗಲಿಲ್ಲ. ಮೊದಲನೇಯದಾಗಿ ಅವನಿಗೆ ಹುಡುಗಿಯರನ್ನು ಬೀಳಿಸುವ ನ್ಯಾಕ್ ಗೊತ್ತಿಲ್ಲ. ನೋಡಿದಾಗಲೆಲ್ಲ ಎಲ್ಲ ಹುಡುಗಿಯರಿಗೂ ಕೆಲಸ ಕೊಡುತ್ತಾನೆ. ಅವನಿಗ್ಯಾರು ಬೀಳುತ್ತಾರೆ? ಎಂದು ನಗೆ ವ್ಯಂಗ್ಯ ಮಾಡಿದರು. ಇದನ್ನು ಕೇಳಿ ಮನೆಯ ಸದಸ್ಯರೆಲ್ಲರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಈ ವೇಳೆ ಲ್ಯಾಂಗ್ ಮಂಜು ನಾನೇದರೂ ಕ್ಯಾಪ್ಟನ್ ಆದರೆ ನನ್ನ ಎರಡು ಕಣ್ಣುಗಳಿಗೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದರಿಂದ ರೊಚ್ಚಿಗೆದ್ದ ಶುಭಾ ಪೂಂಜಾ, ಮಗನೇ ಹಾಗಾದರೆ ನಮ್ಮ ಕೈನಲ್ಲಿ ಕೆಲಸ ಮಾಡಿಸ್ತಿಯಾ ಎಂದು ವಾಟರ್ ಬಾಟಲ್‍ನಿಂದ ಹೊಡೆಯುತ್ತಾರೆ.
ಬಳಿಕ ಲ.. ಲವರ್ ಬಾಯ್ ಬಾ ಇಲ್ಲಿ ಎಂದು ಬ್ರೋಗೌಡರನ್ನು ಕರೆದ ಶುಭಾ, ನಿನಗೊಂದು ಟಾಸ್ಕ್ ಈ ವೀಕೆಂಡ್ ಒಳಗೆ ಒಬ್ಬರನ್ನಾದರೂ ನೀನು ಬೀಳಿಸಬೇಕು. ಕಮಾನ್ ಶಮಂತ್ ಎದ್ದು ತೊಡೆ ತಟ್ಟುತ್ತಾ ಸವಾಲೆಸೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬ್ರೋ ಗೌಡ ವೇಟ್ ವೇಟ್. ನಾನು ಈಗಲೇ ಏನು ಹೇಳುವುದಿಲ್ಲ ಎನ್ನುತ್ತಾರೆ.
ಇದಕ್ಕೆ ಶುಭಾ ನೀನು ಹೆಣ್ಣು ಮಕ್ಕಳನ್ನು ನೋಡಿದಾಗೆಲ್ಲಾ ಕಸ ಗುಡಿಸಿ, ಪಾತ್ರೆ ತೊಳೆಯಿರಿ, ಕ್ಲೀನ್ ಮಾಡಿ ಎಂದರೆ ನಿನಗೆ ಯಾರು ಬೀಳುವುದಿಲ್ಲ ಎಂದು ಹೇಳುವ ಮೂಲಕ ಬ್ರೋ ಗೌಡ ಕಾಲೆಳೆದಿದ್ದಾರೆ.