ಉಸಿರಾಡು ಕರ್ನಾಟಕ ಅಂತ ಸಹಾಯಕ್ಕೆ ಮುಂದಾಗಿದ್ದಾರೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು. ಸದ್ಯ ಕರ್ನಾಟಕದಲ್ಲಿ ಆಗುತ್ತಿರುವ ಸಾವುಗಳನ್ನ ಗಮನಿಸಿರುವ ವಿದೇಶಿ ಕನ್ನಡಿಗರು ಹುಟ್ಟೂರಿನ ಜನರ ಸಹಾಯ ಮಾಡಲು ಮುಂದಾಗಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು 30000 ಡಾಲರ್ ಹಣ ಕಲೆಹಾಕಿದ್ದಾರೆ. ಈ ಹಣದಿಂದ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್ ಖರೀದಿಸಿ ಕರ್ನಾಟಕ್ಕೆ ಕಳಿಸಿಕೊಂಡುವ ಕೆಲಸ ಮಾಡುತ್ತಿದ್ದಾರೆ. ಮೊದಲ ಹಂತದಲ್ಲಿ 25 ಆಕ್ಸಿಜನ್ ಕಾನ್ಸೆಂಟ್ರೇಟರ್ಸ್‍ನ ಖರೀದಿಸಿರುವ ಕೆನಡಾ ಕನ್ನಡಿಗರೂ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ಮೂಲಕ ಅಗತ್ಯ ವಿರುವ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಟೊರೊಂಟೊ, ವ್ಯಾಂಕೋವರ್, ಮಾಂಟ್ರಿಯಲ್, ಒಟ್ಟಾವಾ ಸೇರಿದಂತೆ ಹಲವು ಭಾಗದ ವಿದೇಶಿ ಕನ್ನಡಿಗರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹಣ ಕಲೆಹಾಕಿ ಕರುನಾಡ ಜನರ ಚಿಕಿತ್ಸೆಗೆ ಬೇಕಾದ ನೆರವು ಕೊಡಲು ತಿರ್ಮಾನಿಸಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು. ನಿರ್ಮಾಪಕ ವಿನಯ್ ಬರತೂರ್ ಮತ್ತು ನಂದಕುಮಾರ್ ಈ ಕಾರ್ಯಕ್ರಮದ ರುವಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.