ಹುಟ್ಟುಹಬ್ಬದ ಸಂಭ್ರಮದಲ್ಲಿ ತಲೈವಾ- ಮೋದಿ ಸೇರಿದಂತೆ ಗಣ್ಯರಿಂದ ವಿಶ್

Public TV
4 Min Read
rajini

 – 70 ನೇ ವಸಂತಕ್ಕೆ ಕಾಲಿಟ್ಟ ರಜನಿ

ಮುಂಬೈ: 70 ನೇ ವಸಂತಕ್ಕೆ ಕಾಲಿಟ್ಟ ಸಂಭ್ರಮದಲ್ಲಿರುವ ತಲೈವಾ ರಜನಿಕಾಂತ್‍ಗೆ ಅಭಿಮಾನಿಗಳು ಮತ್ತು ಗಣ್ಯಾತಿಗಣ್ಯರಿಂದ ಶುಭಾಶಯಗಳ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ‘ಪ್ರೀತಿಯ ರಜನಿಕಾಂತ್ ಅವರೇ, ನಿಮಗೆ ಜನ್ಮದಿನದ ಶುಭಾಶಯಗಳು. ನೀವು ಸುದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸುವಂತಾಗಲಿ’ ಎಂದು ಮೋದಿ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ‘ಕನ್ನಡ ನಾಡಿನ ಮಗನೊಬ್ಬ ಇಂದು ತಮಿಳುನಾಡಿನಲ್ಲಿ ಅಪಾರ ಅಭಿಮಾನಿ ವರ್ಗವನ್ನೇ ಸಂಪಾದಿಸಿರುವ ಜನಪ್ರಿಯ ನಟ. ಸಾಧನೆ ಶಿಖರವೇರಿ, ಸಾಧನೆಯ ಹಸಿವಿರುವವರಿಗೆ ಮಾದರಿಯಾಗಿ ನಿಂತ ನಟ ರಜನಿಕಾಂತ್ ಅವರಿಗೆ ಜನ್ಮದಿನವಿಂದು. ಸಿನಿಮಾ ಅಷ್ಟೇ ಅಲ್ಲದೇ ಜನಸೇವೆಯಲ್ಲೂ ತೊಡಗಿರುವ ನಿಜವಾದ ನಾಯಕನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡುವ ಮೂಕಲವಾಗಿ ಜನ್ಮದಿನದ ಶುಭಾಷಯ ಕೋರಿದ್ದಾರೆ.

ಕಾಲಿವುಡ್ ಸಿನಿಮಾಗಳ ಮೂಲಕ ದೊಡ್ಡ ಮಟ್ಟದ ಸಾಧನೆ ಮಾಡಿರುವ ರಜನಿಕಾಂತ್ ಅವರಿಗೆ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಭಾಷೆಗಳಲ್ಲೂ ನಟಿಸುವ ಮೂಲಕ ಜನಮನ ಗೆದ್ದಿದ್ದಾರೆ. 70ನೇ ವರ್ಷಕ್ಕೆ ಕಾಲಿಟ್ಟಿರುವ ಅವರ ಬರ್ತ್‍ಡೇ ಪ್ರಯುಕ್ತ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ರಜನಿ ಅವರ ಫೆÇೀಟೋ ಹಂಚಿಕೊಳ್ಳುವ ಮೂಲಕ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ.

ರಜನಿಕಾಂತ್ ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಜನಿಸಿದರು. ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್ ವಾಡ್. 5ನೇ ವಯಸ್ಸಿನಲ್ಲಿ ರಜನಿ ಅವರ ತಾಯಿ ತೀರಿಹೋದರು. ಅದಾದ ಬಳಿಕ ಅವರ ಪ್ರಾಥಮಿಕ ಶಿಕ್ಷಣ ಆಚಾರ್ಯ ಪಾಠಶಾಲೆಯಲ್ಲಿ, ನಂತರ ಕರ್ನಾಟಕ ರಾಮಕೃಷ್ಣ ವಿದ್ಯಾಲಯದಲ್ಲಿ ಮುಂದುವರಿಸಿದರು. ಸಿನಿಮಾ ರಂಗ ಪ್ರವೇಶಿಸಿದ ಶಿವಾಜಿ ರಾವ್ ನಂತರ ರಜನಿಕಾಂತ್ ಆಗಿ ಗುರುತಿಸಿಕೊಳ್ಳುತ್ತಾರೆ.

ಸಿನಿಜರ್ನಿ:
ರಜಿನಿಕಾಂತ್ ಸಿನಿಮಾ ಜರ್ನಿ ಬಹಳ ವಿಚಿತ್ರ ಮತ್ತು ವಿಭಿನ್ನವಾಗಿದೆ. ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಸಿನಿಮಾ ಎಂದರೆ ರಜನಿಗೆ ಪಂಚಪ್ರಾಣ. ಜೊತೆಗೆ ಸಿನಿಮಾದಲ್ಲೂ ನಟಿಸುವ ಆಸೆ ಇತ್ತು. ಇವರ ಸಿನಿಮಾ ಪ್ರೀತಿಯನ್ನು ಕಣ್ಣಾರೆ ಕಂಡ ಗೆಳೆಯ ರಾಜ್ ಬಹದ್ದೂರ್ ಮದ್ರಾಸ್ ಫಿಲಂ ಇನ್ಟಿಟ್ಯೂಟ್‍ನಲ್ಲಿ ತರಬೇತಿ ತೆಗೆದುಕೊ ಎಂದು ಹುರಿದುಂಬಿಸಿದರು. ನಂತರ ಸಿನಿಮಾದಲ್ಲಿ ನಟಿಸುತ್ತಾ ಅಭಿಮಾನಿಗಳ ನೆಚ್ಚಿನ ನಟ ಎನಿಸಿಕೊಂಡರು. ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾದಲ್ಲಿ ರಜನಿ ನಟಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಹಿರಿಯ ನಟರೊಂದಿಗೆ ಹೆಜ್ಜೆ ಹಾಕಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ, ಖಳನಟನಾಯಿಗಿಯೂ ಸಿನಿಮಾದಲ್ಲಿ ಪಾತ್ರನಿರ್ವಹಿಸಿದ್ದಾರೆ.

ರಜಿನಿ ಕಾಂತ್ ಅವರಿಗೆ ಯಾವುದೇ ಪಾತ್ರಕೊಟ್ಟರು ಆ ಪಾತ್ರಕ್ಕೆ ಜೀವ ತುಂಬುವ ನಟನೆಯನ್ನು ಮಾಡುತ್ತಿದ್ದರು. ಅಭಿಮಾನಿಗಳಿಗೆ ರಜಿನಿಕಾಂತ್ ಮತ್ತು ಅವರ ನಟನೆ ಎಂದರೆ ಬಲು ಇಷ್ಟ. ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ದ ದೊಡ್ಡ ಬಜೆಟ್ ಸಿನಿಮಾದ ಮೂಲಕ ಮತ್ತು ಅವರದೇ ಶೈಲಿಯಲ್ಲಿ ಡೈಲಾಗ್ ಡೆಲಿವರಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ಈಗಲೂ ಕಾಲಿವುಡ್ ಸಿನಿಮಾ ರಂಗದಲ್ಲಿ ರಜನಿಕಾಂತ್‍ಗೆ ಭಾರೀ ಬೇಡಿಕೆಯಿದೆ.

ರಜನಿಕಾಂತ್ ಕನ್ನಡ ಸಿನಿಮಾಗಳು:
ರಜನಿಕಾಂತ್ ಕನ್ನಡದಲ್ಲಿ ಕಥಾಸಂಗಮ, ಬಾಳು ಜೇನು, ಒಂದು ಪ್ರೇಮದ ಕಥೆ, ಸಹೋದರರ ಸವಾಲ್, ಕುಂಕುಮ ರಕ್ಷ, ಗಲಾಟೆ ಸಂಸಾರ, ಕಿಲಾಡಿ ಕಿಟ್ಟು, ಮಾತು ತಪ್ಪದ ಮಗ, ಸವಾಲಿಗೆ ಸವಾಲ್, ತಪ್ಪಿದ ತಾಳ, ಪ್ರಿಯ, ಘರ್ಜನೆ ಸಿನಿಮಾದಲ್ಲಿ ನಟಿಸಿದ್ದಾರೆ.ತಮಿಳಿನಲ್ಲಿ ಅನೇಕ ಸಿನಿಮಾದಲ್ಲಿ ನಟಿಸಿದ ರಜನಿಕಾಂತ್ ಸದ್ಯ ಅನ್ನಾಥೆ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅದರೊಂದಿಗೆ ರಾಜಕೀಯದತ್ತ ಕೂಡ ಗಮನ ಹರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *