– ಧೋನಿ ಬರ್ತ್‍ಡೇ ಕಾಮನ್ ಡಿಪಿ ಇದೇ..!
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜುಲೈ 7ರಂದು ತಮ್ಮ 39ನೇ ವಸಂತಕ್ಕೆ ಕಾಲಿಡಲಿದ್ದಾರೆ. ಧೋನಿ ಅವರ ಹುಟ್ಟುಹಬ್ಬಕ್ಕೆ ಇನ್ನು 6 ದಿನ ಬಾಕಿ ಇದೆ. ಆದರೆ ಅಭಿಮಾನಿಗಳ ಸಂಭ್ರಮ ಈಗಿನಿಂದಲೇ ಶುರುವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಧೋನಿ ಬರ್ತ್ ಡೇ ವಿಚಾರ ಟ್ರೆಂಡ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಧೋನಿ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ‘ಕಾಮನ್ ಡಿಪಿ’ ಒಂದು ಸಖತ್ ವೈರಲ್ ಆಗುತ್ತಿದೆ. #DhoniBirthdayCDP ಹ್ಯಾಶ್ ಟ್ಯಾಗ್ ಕೂಡ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ. ಡಿಪಿ ಫೋಟೋದಲ್ಲಿ ಧೋನಿ ಬ್ಯಾಟ್ ಹಿಡಿದು ನಿಂತಿದ್ದು, ಹಿಂಭಾಗದಲ್ಲಿ ಧೋನಿ ಹೆಸರಿನೊಂದಿಗೆ ಹುಟ್ಟುಹಬ್ಬದ ಶುಭಾಶಯ ಕೋರಲಾಗಿದೆ. ವಿಶೇಷ ಎಂದರೇ ಧೋನಿ ಹೆಸರು ಅಪಾರ್ಟ್ ಮೆಂಟ್ ಮಾದರಿಯಲ್ಲಿರುವುದು ಅಭಿಮಾನಿಗಳ ಮನ ಸೆಳೆದಿದೆ. ಜುಲೈ 7ರಂದು ಧೋನಿ ಅಭಿಮಾನಿಗಳೆಲ್ಲರೂ ಇದೇ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಡಿಪಿ ಆಗಿ ಬಳಕೆ ಮಾಡುವುದಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
Advertisement
Happy to be releasing the Common DP to celebrate @msdhoni‘s birthday!
Designed By @nxtgen_studio ????
Advance Birthday wishes Thala #WhistlePodu #DhoniBirthdayCDP @DHONIism pic.twitter.com/zvauZmWdwv
— Lakshmi Narayanan (@lakshuakku) June 27, 2020
Advertisement
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ, ವೆಸ್ಟ್ ಇಂಡೀಸ್ ಆಲ್‍ರೌಂಡರ್ ಡ್ವೇನ್ ಬ್ರಾವೋ ಧೋನಿ ಅವರಿಗೆ ಹಾಡೊಂದನ್ನು ಅಂಕಿತ ಮಾಡಲು ಸಿದ್ಧತೆ ನಡೆಸಿದ್ದಾರೆ. ಧೋನಿ ಅವರ ಸಾಧನೆಯನ್ನು ಬಿಂಬಿಸುವ ‘ಎಂಎಸ್ ಧೋನಿ ಸಾಂಗ್ ನಂ.7’ ಹೆಸರಿನ ಹಾಡನ್ನು ಬಿಡುಗಡೆ ಮಾಡುವುದಾಗಿ ಬ್ರಾವೋ ಹೇಳಿದ್ದಾರೆ.
Advertisement
2019ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಧೋನಿ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಕಮ್‍ಬ್ಯಾಕ್ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಕೊರೊನಾ ವೈರಸ್‍ನಿಂದಾಗಿ ಟೂರ್ನಿ ಕೂಡ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
Advertisement
2004ರಲ್ಲಿ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಬಾಂಗ್ಲಾದೇಶ ವಿರುದ್ಧದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಧೋನಿ, ಮೊದಲ ಪಂದ್ಯದಲ್ಲೇ ರನ್‍ಔಟ್ ಆಗುವ ಮೂಲಕ ಹೊರ ನಡೆದಿದ್ದರು. ಆ ಬಳಿಕ ನಡೆದ ಮೂರು ಪಂದ್ಯಗಳಲ್ಲೂ ಧೋನಿ ಬ್ಯಾಟಿಂಗ್ ಮಿಂಚಲು ವಿಫಲರಾಗಿದ್ದರು. ಆ ವೇಳೆಗೆ ಧೋನಿ ಬ್ಯಾಟಿಂಗ್ ಸಾಮಥ್ರ್ಯದ ಕುರಿತು ಟೀಕೆಗಳು ಕೇಳಿ ಬಂದಿದ್ದವು. ಆದರೆ ವಿಶಾಖಪಟ್ಟಣದಲ್ಲಿ ಆಡಿದ್ದ ಪಂದ್ಯದಲ್ಲಿ ಶತಕ ಸಿಡಿಸಿ (123 ರನ್) ಧೋನಿ ಮಿಂಚಿದ್ದರು. ಟೀಂ ಇಂಡಿಯಾದ ನಾಯಕರಾಗಿ 2007 ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್, 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ತಂದಿದ್ದರು. ವಿಶ್ವಕಪ್ ಕ್ರಿಕೆಟ್‍ನಲ್ಲಿ ಐಸಿಸಿ ಆಯೋಜಿಸುವ ಮೂರು ಟೂರ್ನಿಗಳನ್ನು ಗೆದ್ದ ಏಕೈಕ ಕ್ಯಾಪ್ಟನ್ ಆಗಿ ದಾಖಲೆ ಬರೆದಿದ್ದಾರೆ.