ಮಂಡ್ಯ: ಗ್ರಾಮ ವಾಸ್ತವ್ಯ ಮಾದರಿಯಲ್ಲಿ ರೈತರೊಂದಿಗೆ ವಾಸ್ತವ್ಯ ಮಾಡಲು ಕೃಷಿ ಸಚಿವ ಬಿಸಿ ಪಾಟೀಲ್ ರೈತರೊಂದಿಗೆ ಒಂದು ದಿನ ಎಂಬ ವಿಶೇಷ ಕಾರ್ಯಕ್ರಮವನ್ನು ಆರಂಭಿಸಿದ್ದು, ಮಂಡ್ಯದಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆಗೆ ಚಾಲನೆ ನೀಡಿದರು. ತಮ್ಮ ಹುಟ್ಟಹಬ್ಬದ ದಿನದಂದೇ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಮಂಡ್ಯ ಜಿಲ್ಲೆಯ ಮಡುವಿನಕೋಡಿ ಗ್ರಾಮದ ಕಬ್ಬಿನ ತಾಕಿನಲ್ಲಿ, ನೂತನ ಯಾಂತ್ರಿಕೃತ ಕಬ್ಬು ನಾಟಿ ಮಾಡುವ ವಿಧಾನಕ್ಕೆ ಚಾಲನೆ ನೀಡಲಾಯಿತು.#Mandya | #ಮಂಡ್ಯ | #Sugarcane | #ಕಬ್ಬು@DDChandanaNews | @KarnatakaVarthe | @BSYBJP | @Karnataka_DIPR | @PIBBengaluru | @NarayanaGowda_ | @CMofKarnataka pic.twitter.com/VjS6GnYE7p
— Kourava B.C.Patil (@bcpatilkourava) November 14, 2020
ಕೆ.ಆರ್. ಪೇಟೆ ತಾಲೂಕಿನ ಮಡುವಿನಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ನಾನು ವಾಸ್ತವತೆಯನ್ನು ಅರಿಯುತ್ತಿದ್ದೇನೆ. ನಾನು ಅವರನ್ನು ಕಾಪಿ ಮಾಡುತ್ತಿಲ್ಲ. ಅವರು ಗ್ರಾಮದಲ್ಲಿ ಇದ್ದು ಮಲಗಿ ಹೋಗುತ್ತಿದ್ದರು. ನಾನು ಬೆಳಗ್ಗಿಯಿಂದ ರಾತ್ರಿವರೆಗೂ ಇದ್ದು ವಾಸ್ತವತೆ ಅರಿಯುತ್ತಿದ್ದೇನೆ. ಪ್ರತಿ ಜಿಲ್ಲೆಗೂ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸುತ್ತೇವೆ. ನಾವು ಮಾಡುವ ಕಾರ್ಯಕ್ರಮದಿಂದ ರೈತರ ಸಮಸ್ಯೆ ತಿಳಿಯುತ್ತದೆ. ತಿಂಗಳಿಗೆ ಮೂರು ದಿನ ಈ ಕಾರ್ಯಕ್ರಮ ಮಾಡುತ್ತೇನೆ. ಎಲ್ಲಾ ಜಿಲ್ಲೆ ಸುತ್ತಿದ ಬಳಿಕ ಸಿಎಂಗೆ ವರದಿ ನೀಡುತ್ತೇನೆ. ರೈತರ ಸಂಕಷ್ಟಗಳನ್ನು ಹೇಗೆ ನಿವಾರಿಸಬಹುದು ಎಂದು ಯೋಚನೆ ಮಾಡುತ್ತೇವೆ. ನಾನು ರೈತನ ಮಗನಾಗಿದ್ದು, ಮೊದಲೆಲ್ಲಾ ನಾನು ಎಲ್ಲಾ ಕೆಲಸವನ್ನು ಮಾಡಿದ್ದೇನೆ. ಪೊಲೀಸ್ ಇಲಾಖೆಗೆ, ಸಿನಿಮಾಗೆ ಬಂದ ಮೇಲೆ ಅನುಭವ ಕಡಿಮೆಯಾಗಿದೆ. ಹೀಗಾಗಿ ಮೈ ಸ್ವಲ್ಪ ಬಗ್ಗುತ್ತಿಲ್ಲ. ಈಗ ಮತ್ತೆ ಮೈ ಬಗ್ಗಿಸಿದ್ರೆ ರೈತರ ರೀತಿ ಕೆಲಸ ಮಾಡುತ್ತೇವೆ ಎಂದರು.
ಆತ್ಮೀಯರು ಹಾಗೂ ತೋಟಗಾರಿಕಾ ಸಚಿವರಾದ ಶ್ರೀ ನಾರಾಯಣಗೌಡ ಅವರ ಮನೆಯಲ್ಲಿ, ಇಂದು ನನ್ನ ಹುಟ್ಟುಹಬ್ಬದ ನಿಮಿತ್ತ ಆತ್ಮೀಯರ ಹಾಗೂ ಕಾರ್ಯಕರ್ತರಿಂದ ಶುಭಾಶಯಗಳನ್ನು ಸ್ವೀಕರಿಸಿ, ಅವರಿಗೆ ನನ್ನ ಮನಃಪೂರ್ವಕ ಧನ್ಯವಾದಗಳನ್ನು ತಿಳಿಸಿದ ಕ್ಷಣಗಳು.#Mandya | #ಮಂಡ್ಯ @NarayanaGowda_ pic.twitter.com/p77gUZIZJ2
— Kourava B.C.Patil (@bcpatilkourava) November 14, 2020
ಜಿಲ್ಲೆಯ ಮಡುವಿನಕೋಡಿ ಗ್ರಾಮದ ಹೊರಹೊಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಬಿಸಿ ಪಾಟೀಲ್ ಕಬ್ಬು ತರಗು ನಿವರ್ಹಣೆ ಬಗ್ಗೆ ಪ್ರಾತ್ಯಕ್ಷಿಕೆಯನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಟ್ರ್ಯಾಕ್ಟರ್ ಚಲಾಯಿಸಿ ರಾಗಿ, ಕಬ್ಬು ಬಿತ್ತನೆ ಚಾಲನೆ ನೀಡಿದರು. ಅಲ್ಲದೇ ಮಾಯಿಗೌಡ ಅವರ ಜಮೀನಿನಲ್ಲಿ ರೈತ ಮಹಿಳೆಯರೊಂದಿಗೆ ರಾಗಿ ನಾಟಿ ಮಾಡಿದರು. ಜೈ ಕಿಸಾನ್ ಘೋಷಣೆ ಕೂಗೂತ್ತ ಸಚಿವರು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.
ಬಳಿಕ ಕೆಆರ್ ಪೇಟೆ ತಾಲೂಕಿನ ಹೊಸಕೋಟೆ ಗ್ರಾಮದಲ್ಲಿರುವ ಲಕ್ಷ್ಮೀ ದೇವಮ್ಮ ಅವರ ಸಮಗ್ರ ಕೃಷಿ ತೋಟಕ್ಕೆ ಭೇಟಿ ಕೊಟ್ಟ ಸಚಿವರು, ಭತ್ತದ ಗದ್ದೆ ವೀಕ್ಷಿಣೆ ಮಾಡಿ ಗೊಬ್ಬರವನ್ನು ಚೆಲ್ಲುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಸು ಮತ್ತು ಕುರಿಗಳ ಮೇವಿಗಾಗಿ ಹಲ್ಲು ಕಟಾವು ಮಾಡಿದರು. ಬಿಸಿ ಪಾಟೀಲ್ ಅವರಿಗೆ ಸಚಿವ ನಾರಾಯಣಗೌಡ ಸಾಥ್ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ತೋಟಗಾರಿಕಾ ಸಚಿವರಾದ ನಾರಾಯಣಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರಿಗೆ, ಕಾರ್ಯಕರ್ತರು ಶುಭಾಶಯ ಕೋರಿದರು.
ರೈತರಿಗೆ ಆತ್ಮಸ್ಥೆರ್ಯ ತುಂಬುವ, ಸಮಗ್ರ ಕೃಷಿ ಮತ್ತು ಉತ್ಪಾದನಾ ವೆಚ್ಚ ಹಾಗೂ ರೈತರ ಆತ್ಮಹತ್ಯೆ ಕಾರಣ ಏನು ಎಂಬುದನ್ನು ತಿಳಿಯುವುದು. ಮಾದರಿ ರೈತರನ್ನು ಭೇಟಿ ಮಾಡಿ ಅವರ ಅನುಭವ ಬೇರೆ ರೈತರಿಗೆ ಮಾದರಿಯಾಗುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ತಿಂಗಳು 2 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 7 ರಿಂದ ದಿನಪೂರ್ತಿ ರೈತರೊಂದಿಗೆ ಇದ್ದು, ಸಮಗ್ರ ಮಾಹಿತಿ ಸಂಗ್ರಹಿಸಿ ಕೃಷಿ ಇಲಾಖೆಯಲ್ಲಿ ಹೊಸ ಬದಲಾವಣೆ ಮಾಡಲು ಸಚಿವರು ಕಾರ್ಯಕ್ರಮವನ್ನು ಆರಂಭಿಸಿದ್ದಾರೆ.