ಹಿರಿಯ ಗಾಯಕಿ ಅನುರಾಧಾ ಪುತ್ರ ಆದಿತ್ಯ ಪೌಡ್ವಾಲ್ ಇನ್ನಿಲ್ಲ- ಶಂಕರ್ ಮಹದೇವನ್ ಮಾಹಿತಿ

Public TV
1 Min Read
Aditya Paudwal Son Of Playback Singer Anuradha Paudwal Dies Of

ನವದೆಹಲಿ: ಹಿರಿಯ ಗಾಯಕಿ ಅನುರಾಧಾ ಪೌಡ್ವಾಲ್ ಪುತ್ರ ಆದಿತ್ಯ ಪೌಡ್ವಾಲ್(35) ಅವರು ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಗಾಯಕ, ಸಂಗೀತ ಸಂಯೋಜಕ ಶಂಕರ್ ಮಹದೇವನ್ ಘೋಷಿಸಿದ್ದು, ತಮ್ಮ ಇನ್‍ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಆದಿತ್ಯ ಫೋಟೋ ಹಾಕಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಆದಿತ್ಯ ಪೌಡ್ವಾಲ್ ಕಳೆದ ಕೆಲವು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಿಡ್ನಿ ವೈಫಲ್ಯದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ಶಂಕರ್ ಮಹದೇವನ್ ತಿಳಿಸಿದ್ದಾರೆ.

Untitled 1fgfggfgfgg

ನಮ್ಮ ಪ್ರೀತಿಯ ಆದಿತ್ಯ ಪೌಡ್ವಲ್ ಇನ್ನಿಲ್ಲ ಎಂಬ ಈ ಸುದ್ದಿ ಕೇಳಿ ತುಂಬಾ ಘಾಸಿಯಾಯಿತು. ಅತ್ಯದ್ಭುತ ಸಂಗೀತಗಾರನಾಗಿದ್ದ. ಹಾಸ್ಯ ಪ್ರಜ್ಞೆ ಹೊಂದಿದ ಅತ್ಯದ್ಭುತ ಮನುಷ್ಯ. ಹಲವು ಪ್ರಾಜೆಕ್ಟ್ ಗಳಲ್ಲಿ ನನ್ನೊಂದಿಗೆ ಜೊತೆಯಾಗಿದ್ದ. ಇದೀಗ ಇಲ್ಲವಾಗಿದ್ದಾನೆ. ಅವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ. ಲವ್ ಯು ಆದಿತ್ಯ, ವಿಲ್ ಮಿಸ್ ಯು ಎಂದು ಬರೆದುಕೊಂಡಿದ್ದಾರೆ.

https://www.instagram.com/p/CFBkgO_ntON/?utm_source=ig_embed&utm_campaign=loading

ಅಲ್ಲದೆ ಈ ಕುರಿತು ಮಾತನಾಡಿರುವ ಶಂಕರ್ ಮಹದೇವನ್, ಆದಿತ್ಯಾ ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಅಲ್ಲದೆ ಉತ್ಸಾಹಬರಿತ ವ್ಯಕ್ತಿಯಾಗಿದ್ದ. ತುಂಬಾ ವರ್ಷಗಳಿಂದ ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಅಧಿಕ ರಕ್ತದೊತ್ತಡ ಸೇರಿದಂತೆ ಹಲವು ದೈಹಿಕ ಕಾಯಿಲೆಗಳಿದ್ದವು. ಹಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದರು. ನಂತರ ಆರಾಮಾಗಿದ್ದರು. ನಂತರ ಲಗ್ಸ್ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೆ ಅಂತಿಮವಾಗಿ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತು. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

shankar mahadevan

ಅಲ್ಲದೆ ಆದಿತ್ಯ ಪೌಡ್ವಾಲ್ ಅವರ ಸಾವಿಗೆ ಸಂಗೀತ ಲೋಕ ಕಂಬನಿ ಮಿಡಿದಿದ್ದು, ಅರ್ಮಾನ್ ಮಲಿಕ್ ಸೇರಿದಂತೆ ಸಂಗೀತ ದಿಗ್ಗಜರು ಸಂತಾಪ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *