ಶ್ರೀನಗರ: ಕುಪ್ವಾರದಲ್ಲಿ ಹಿಮಪಾತದಿಂದ ರಸ್ತೆ ಬಂದ್ ಆಗಿದ್ದರಿಂದ ಸೈನಿಕರ ವಾಹನದಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಆರ್ಮಿ ಅಂಬುಲೆನ್ಸ್ ಮೂಲಕ ತಾಯಿ ಮತ್ತು ಮಗುವವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಬೆಳಗ್ಗೆ ಕಲರೂಸ್ ಕಂಪನಿ ಕಮಾಂಡರ್ ಗೆ ಕೆರೆ ಮಾಡಿದ ಆಶಾ ಕಾರ್ಯಕರ್ತೆ ಗರ್ಭಿಣಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಹಿಮಪಾತದಿಂದಾಗಿ ಗ್ರಾಮಕ್ಕೆ ಯಾವುದೇ ಅಂಬುಲೆನ್ಸ್ ಬರುತ್ತಿಲ್ಲ. ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಹೇಳಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಕಮಾಂಡರ್ ಆಶಾ ಕಾರ್ಯಕರ್ತೆ ಸೂಚಿಸಿ ದ ನಾರಿಕೂಟ್ ಸ್ಥಳಕ್ಕೆ ಸೇನೆ ವೈದ್ಯಕೀಯ ಟೀಂ ಕಳುಹಿಸಿದ್ದಾರೆ. ಸೇನಾ ವಾಹನದಲ್ಲಿ ಮಹಿಳೆಯನ್ನ ಆಸ್ಪತ್ರೆಗೆ ಕರೆ ತರುವ ಮಾರ್ಗದಲ್ಲಿ ಹೆರಿಗೆಯಾಗಿದೆ. ವಾಹನದಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ನಂತರ ಮಗು ಮತ್ತು ತಾಯಿಯನ್ನ ಕಲರೂ ಆಸ್ಪತ್ರೆಗೆ ದಾಖಲಿಸಲಾಗಿದೆ.