ಹಿಟ್‍ಮ್ಯಾನ್ ಹಸ್ತಾಕ್ಷರ ಹಾಕಿಸಿಕೊಂಡ ಫ್ಯಾನ್‍ಬಾಯ್ ಅವೇಶ್ ಖಾನ್

Public TV
1 Min Read
avesh khan

ಚೆನ್ನೈ: ಕ್ರಿಕೆಟ್ ಆಟಗಾರರನ್ನು ನೋಡಿಕೊಂಡು ಆ ಆಟಗಾರರನ್ನು ಇಷ್ಟ ಪಡುತ್ತ ಬೆಳೆದ ಹುಡುಗನೊಬ್ಬ ಒಂದು ದಿನ ಅದೇ ಆಟಗಾರರನ ವಿರುದ್ಧ ಅಡಿದ್ದಾರೆ. ಅವರೊಂದಿಗೆ ಸಮಯ ಕಳೆದಾಗ ಪಟ್ಟ ಖುಷಿಯನ್ನು ನೆನೆಪಿನಲ್ಲಿ ಇಡುವುದಕ್ಕಾಗಿ ಆಟಗಾರನೊಬ್ಬ ಆತನ ಫೇವ್‍ರೇಟ್ ಆಟಗಾರನಿಂದ ತನ್ನ ಜೆರ್ಸಿಗೆ ಹಸ್ತಾಕ್ಷರ ಪಡೆದುಕೊಂಡು ಸಂತೋಷ ಪಟ್ಟ ಅಪರೂಪದ ವಿದ್ಯಮಾನ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕಂಡು ಬಂದಿದೆ.

avesh kahan

14ನೇ ಆವೃತ್ತಿಯ ಐಪಿಎಲ್‍ನ 13ನೇ ಪಂದ್ಯದಲ್ಲಿ ಮುಂಬೈ ಮತ್ತು ಡೆಲ್ಲಿ ತಂಡಗಳು ಸೆಣಸಾಡಿದ್ದವು. ಈ ಪಂದ್ಯ ಮುಗಿದ ಬಳಿಕ ಡೆಲ್ಲಿ ತಂಡದ ಯುವ ಬೌಲರ್ ಅವೇಶ್ ಖಾನ್ ತನ್ನ ಫೆವ್‍ರೇಟ್ ಆಟಗಾರರಾದ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿ ತನ್ನ ಡೆಲ್ಲಿ ತಂಡದ ಜೆರ್ಸಿಯನ್ನು ರೋಹಿತ್ ಕೈಗೆ ನೀಡಿ ಅವರ ಹಸ್ತಾಕ್ಷರ ಹಾಕಿಸಿಕೊಂಡು ಸಂಭ್ರಮ ಪಟ್ಟಿದ್ದಾರೆ.

avesh kahan 1

ಅವೇಶ್ ಖಾನ್ ಜೊತೆ ಸ್ವಲ್ಪಹೊತ್ತು ಮಾತನಾಡಿದ ರೋಹಿತ್ ಕೂಡ ನಗುನಗುತ್ತಲೆ ಅವೇಶ್ ಖಾನ್ ಅವರ ಜೆರ್ಸಿಗೆ ಹಸ್ತಾಕ್ಷರ ಹಾಕಿ ಹಿಂದಿರುಗಿಸಿದ್ದಾರೆ. ಅವೇಶ್ ಖಾನ್ ತನ್ನ ನೆಚ್ಚಿನ ಆಟಗಾರನಿಂದ ಹಸ್ತಾಕ್ಷರ ಪಡೆಯುತ್ತಿರುವ ಫೋಟೋವನ್ನು ಡೆಲ್ಲಿ ತಂಡ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡು ‘ಪಂದ್ಯದ ಬಳಿಕ ಫ್ಯಾನ್‍ಬಾಯ್ ಅವೇಶ್ ಖಾನ್’ ಎಂದು ಬರೆದುಕೊಂಡಿದೆ.

ಮುಂಬೈ ವಿರುದ್ಧ ಪಂದ್ಯವನ್ನು ಡೆಲ್ಲಿ ತಂಡ 6 ವಿಕೆಟ್‍ಗಳಿಂದ ಗೆದ್ದಿತ್ತು. ಇದೇ ಪಂದ್ಯದಲ್ಲಿ ಅವೇಶ್ ಖಾನ್ 2 ಓವರ್ ಎಸೆದು 15 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ಅವೇಶ್ ಖಾನ್ 14ನೇ ಆವೃತ್ತಿಯ ಐಪಿಎಲ್‍ನ ಇದುವರೆಗಿನ ಪಂದ್ಯಗಳಿಂದ 8 ವಿಕೆಟ್ ಪಡೆಯುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ದ್ವೀತಿಯ ಸ್ಥಾನಿಯಾಗಿ ಗುರುತಿಸಿಕೊಂಡಿದ್ದಾರೆ. 14ನೇ ಆವೃತ್ತಿ ಐಪಿಎಲ್‍ನಲ್ಲಿ ಈವರೆಗೆ ಆವೇಶ್ ಖಾನ್ ಡೆಲ್ಲಿ ಪರ 4 ಪಂದ್ಯಗಳಲ್ಲಿ 14 ಓವರ್ ಎಸೆದು, 103 ರನ್ ಬಿಟ್ಟುಕೊಟ್ಟು 8 ವಿಕೆಟ್ ಕಬಳಿಸಿದ್ದಾರೆ. ಇದರೊಂದಿಗೆ ಈ ಬಾರಿ ಪರ್ಪಲ್ ಕ್ಯಾಪ್ ಹೋಲ್ಡರ್ ಅವಕಾಶವನ್ನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *