– ಲವ್ ಜಿಹಾದ್ ಕಾನೂನಿಗೆ ಸಿದ್ದರಾಮಯ್ಯ ವಿರೋಧ
– ಗೋಹತ್ಯೆ ನಿಷೇಧ ಕಾನೂನಿಗೂ ವಿರೋಧ
ಬೆಂಗಳೂರು: ಲವ್ ಜಿಹಾದ್ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
Advertisement
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ಸರ್ಕಾರ ಚಿಂತನೆ ಹಿನ್ನೆಲೆ ಇಂದು ಮುಸ್ಲಿಂ ಮುಖಂಡರ ನಿಯೋಗ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿತ್ತು. ಈ ವೇಳೆ ಮಾತಾಡಿದ ಸಿದ್ದರಾಮಯ್ಯ, ಕೇಂದ್ರ ವಿವೇಕ ಇಲ್ಲದೆ ಕಾನೂನು ತರುತ್ತಿದೆ. ಮದುವೆ ಅವರವರ ವೈಯುಕ್ತಿಕ ಆಯ್ಕೆ. ಈ ದೇಶದಲ್ಲಿ ಮುಸಲ್ಮಾನರು ಮೊಘಲರು 600 ವರ್ಷಗಳಿಂದ ಇದ್ದಾರೆ. ಎಷ್ಟೋ ಸಂಬಂಧಗಳು ಬೆಳೆದು ಬಿಟ್ಟಿದ್ದಾವೆ ಎಂದರು.
Advertisement
Advertisement
ಇದೇ ವೇಳೆ ಹಿಂದೂ- ಮುಸ್ಲಿಂ ಕ್ರಾಸ್ ಆಗಿ ಹುಟ್ಟಿದವರು ಬಹಳ ಜನ ಇದ್ದಾರೆ. ನನ್ನ ಪ್ರಕಾರ ಇದೊಂದು ಮೂರ್ಖತನ. ಇದನ್ನು ಸಂವಿಧಾನ ಅನುಮತಿಸುವುದಿಲ್ಲ. ಕೋರ್ಟಿಗೆ ಹೋದರೆ ವಜಾ ಆಗುತ್ತವೆ. ವಯಸ್ಸಿಗೆ ಬಂದ ಹೆಣ್ಣು ಅಥವಾ ಗಂಡು ಅವರ ಇಚ್ಛೆಯಂತೆ ಬದುಕಬಹುದು ಎಂದು ಇತ್ತೀಚೆಗಷ್ಟೇ ಅಲಹಬಾದ್ ಹೈಕೋರ್ಟ್ ಹೇಳಿದೆ. ತೀರ್ಪಿನ ನಂತರವೂ ಕೇಂದ್ರ ಕಾನೂನು ಜಾರಿಗೆ ಮುಂದಾಗಿರುವುದು ದುರುದ್ದೇಶದ ಸಂಗತಿ ಆಗಿದೆ ಎಂದರು.
Advertisement
ಗೋಹತ್ಯೆ ನಿಷೇಧ ಕಾನೂನಿಗೆ ವಿರೋಧಿಸಿದ್ರು. ಮುದಿ ಹಸು, ಗೊಡ್ಡು ಹಸುನಾ ಏನು ಮಾಡೋದು? ಆರ್‍ಎಸ್‍ಎಸ್‍ನವರ ಮನೆಗೆ ಹೊಡೆಯೋದಾ? ಹಾಲು, ತುಪ್ಪ ಎಲ್ಲ ಇವರು ತಗೊಂಡು ತಿಂತಾರೆ. ಪಾಪ ಅವರು ಸಗಣಿ ಇಟ್ಕೊಂಡು ಏನ್ ಮಾಡೋದು. ನಾನು ತಿಪ್ಪೆಗೆ ಸಗಣಿ ಹೊತ್ತಿದ್ದೇನೆ. ಇವರು ಹೊತ್ತಿದ್ದಾರಾ? ನಮ್ಮ ದೇಶದಲ್ಲಿ ಹುಚ್ಚರ ಸಂತೆಯಲ್ಲಿ ಉಂಡೋನೆ ಜಾಣ ಅನ್ನೋ ಹಾಗಾಗಿದೆ. ಗೋಹತ್ಯೆ ನಿಷೇಧ ಮಾಡಿದ್ರೆ ಸಾಕಷ್ಟು ಬಡವರಿಗೆ ತೊಂದರೆ ಆಗುತ್ತದೆ ಎಂದು ತಿಳಿ ಹೇಳಿದರು.
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಗೋ ಹತ್ಯೆ ನಿಷೇಧ ಕಾಯಿದೆ ಕುರಿತು ಮುಸ್ಲಿಂ ಸಮುದಾಯದ ಮುಖಂಡರು ಇಂದು ನನ್ನನ್ನು ಭೇಟಿಯಾಗಿ ಚರ್ಚಿಸಿದರು. ಈ ವೇಳೆ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಜೊತೆಗಿದ್ದರು. pic.twitter.com/70REOPg1cI
— Siddaramaiah (@siddaramaiah) December 1, 2020