ಲಕ್ನೋ: ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ ವ್ಯಕ್ತಿಗೆ ಬೆದರಿಕೆ ಕರೆಗಳು ಬರಲು ಆಗಮಿಸಿದ್ದು, ಪೊಲೀಸರು ಭದ್ರತೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಲೀಘರ್ ನಿವಾಸಿ ಕರಮ್‍ವೀರ್ ಅವರು ಇತ್ತೀಚೆಗೆ ಮುಸ್ಲಿಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ. ಈ ಹಿಂದೆ ಇವರ ಹೆಸರು ಖಾಸೀಮ್ ಎಂದಿದ್ದು, ಮತಾಂತರವಾದ ಬಳಿಕ ಹಸೆರನ್ನು ಬದಲಾಯಿಸಿಕೊಂಡಿದ್ದಾರೆ. ನಾನು ಮತಾಂತರ ಹೊಂದಿದ ಬಳಿಕ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ಪೊಲೀಸ್ ಭದ್ರತೆ ಬೇಕು ಎಂದು ಕರಮ್‍ವೀರ್ ಅವರು ಮನವಿ ಮಾಡಿದ್ದಾರೆ.
Advertisement
Advertisement
ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಅಲ್ಲದೆ ಅವರಿಗೆ ಕೆಲವರು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಅವರ ಮನೆಗೆ ಭದ್ರತೆ ಒದಗಿಸಿದ್ದೇವೆ ಎಂದು ಅಲೀಘರ್ ಅಪರಾಧ ವಿಭಾಗದ ಎಸ್‍ಪಿ ಅರವಿಂದ್ ಕುಮಾರ್ ಕುಮಾರ್ ತಿಳಿಸಿದ್ದಾರೆ.
Advertisement
Advertisement
ಕರಮ್‍ವೀರ್ ಅವರು ಡಿಸೆಂಬರ್ 20ರಂದು ಸನಾತನ ಹಿಂದೂ ಧರ್ಮಕ್ಕೆ ತಮ್ಮ ಮಕ್ಕಳೊಂದಿಗೆ ಮತಾಂತರಗೊಂಡಿದ್ದಾರೆ. ದೆಹಲಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಮ್‍ವೀರ್ ಹಾಗೂ ಅನಿತಾ ಅವರು ಕೆಲವು ವರ್ಷಗಳ ಹಿಂದೆ ಹಿಂದೂ ಧರ್ಮದ ಪ್ರಕಾರ ವಿವಾಹವಾಗಿದ್ದಾರೆ. ನ್ಯಾಯಾಲಯದಲ್ಲಿ ವಿವಾಹ ನೋಂದಣಿಯನ್ನು ಸಹ ಮಾಡಿಸಿದ್ದಾರೆ. ವಿವಾಹದ ಬಳಿಕ ಸಹ ಹಲವು ವರ್ಷಗಳ ಕಾಲ ನಮ್ಮ ಧರ್ಮದ ಸಂಪ್ರದಾಯವನ್ನೇ ಪಾಲಿಸಿಕೊಂಡು ಬಂದಿದ್ದೇವೆ ಎಂದು ಕರಮ್‍ವೀರ್ ತಿಳಿಸಿದ್ದಾರೆ.
ಕರಮ್‍ವೀರ್ ಅವರ ಜೀವಕ್ಕೆ ಅಪಾಯವಿದೆ. ನಮ್ಮ ಹೊಸ ನಂಬಿಕೆಯನ್ನು ತ್ಯಜಿಸಲು ಕೆಲವರು ಒತ್ತಡ ಹೇರಲು ಯತ್ನಿಸುತ್ತಿದ್ದಾರೆ. ನನ್ನ ಪತಿಗೆ ಪದೇ ಪದೇ ಬೆದರಿಕೆಗಳು ಬರುತ್ತಿವೆ. ಇತ್ತೀಚೆಗೆ ಸ್ವೀಕರಿಸಿರುವ ಧರ್ಮವನ್ನು ತ್ಯಜಿಸಲು ಕೆಲವರು ಒತ್ತಡ ಹೇರುತ್ತಿದ್ದಾರೆ. 5 ದಿನಗಳಿಂದ ಮನೆಗೆ ಹೋಗಿಲ್ಲ ಎಂದು ಕರಮ್‍ವೀರ್ ಪತ್ನಿ ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.