– ಪತಿ ಕೆಲಸಕ್ಕೆ ಹೋದಾಗ ಪತ್ನಿಯ ಕಣ್ಣಾಮುಚ್ಚಾಲೆ ಆಟ
ಪಾಟ್ನಾ: ಪರ ಪುರುಷನೊಂದಿಗೆ ಮಂಚ ಏರಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನ್ನ ಪತಿ ಕೊಲೆಗೈದಿರುವ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಸಬೂಲ್ ಕುಮಾರ್ ಕೆಲಸದ ನಿಮಿತ್ ದೆಹಲಿಯಲ್ಲಿ ವಾಸವಾಗಿದ್ದನು. ಆದ್ರೆ ಪತ್ನಿ ರೇಖಾದೇವಿ ರೂಪಾನಾಬಿಗ್ಹಾ ಗ್ರಾಮದಲ್ಲಿ ವಾಸವಾಗಿದ್ದಳು. ಪತಿ ಕೆಲಸಕ್ಕೆ ದೆಹಲಿಗೆ ತೆರಳುತ್ತಿದ್ದಂತೆ ಮನೆಗೆ ಧರಂಪುರ ಗ್ರಾಮದ ನಿಶಾಂತ್ ಅಲಿಯಾಸ್ ಚೋಟುನನ್ನ ಕರೆಸಿಕೊಳ್ಳುತ್ತಿದ್ದಳು. ಕಳೆದ ಹಲವು ದಿನಗಳಿಂದ ರೇಖಾ ಮತ್ತು ನಿಶಾಂತ್ ಕಣ್ಣಾಮುಚ್ಚಾಲೆ ಆಟ ನಡೆದಿತ್ತು.
ಬುಧವಾರ ಗ್ರಾಮಕ್ಕೆ ಬಂದ ಸಬೂಲ್ ಕುಮಾರ್ ಬಾಗಿಲು ತಟ್ಟಿದ್ದಾನೆ. ಪತ್ನಿ ಬಾಗಿಲು ತೆಗೆಯದಿದ್ದಾಗ ಅನುಮಾನಗೊಂಡ ಸಬೂಲ್ ನಿಧಾನವಾಗಿ ಹಿಂಬಾಗಿಲಿನಿಂದ ಒಳಗೆ ಬಂದಿದ್ದಾನೆ. ಪತ್ನಿ ನಿಶಾಂತ್ ಜೊತೆಗಿದ್ದಾಗ ರೆಡ್ ಹ್ಯಾಂಡ್ ಸಿಕ್ಕಾಗ ಕೋಪಗೊಂಡ ಸಬೂಲ್ ಮನೆಯಲ್ಲಿ ಹರಿತವಾದ ವಸ್ತುಗಳಿಂದ ಇಬ್ಬರನ್ನು ಕೊಚ್ಚಿ ಕೊಲೆಗೈದಿದ್ದಾನೆ. ಸಬೂಲ್ ಕೋಪಕ್ಕೆ ಇಡೀ ಮನೆಯಲ್ಲಿ ರಕ್ತದ ಹೊಳೆ ಹರಿದಿತ್ತು. ಇದನ್ನೂ ಓದಿ: ಲಕ್ಷ್ಮಣನ ಜೊತೆ ಡಿಂಗ್‍ಡಾಂಗ್, ರೂಪೇಶ್ ಜೊತೆ ಲವ್ವಿಡವ್ವಿ – ವರ್ಷಿಣಿಯ ಡಬಲ್ ರೋಲ್‍ನಿಂದ ಪ್ರಿಯಕರ ಬಕ್ರಾ!
ಜೋಡಿ ಕೊಲೆಯ ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಸಬೂಲ್ ನನ್ನ ಬಂಧಿಸಿದ್ದಾರೆ. ಮೃತದೇಹಗಳ ಮರಣೋತ್ತರ ಶವ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 11 ಮದ್ವೆಯಾದ 23ರ ಯುವಕ – ಪತ್ನಿ ಎದುರೇ ಕೆಲಸದವಳ ಜೊತೆ ಸರಸ