ಮುಂಬೈ: ಕೊರೊನಾ ಭೀತಿ ಕಡಿಮೆಯಾದ ಬಳಿಕ ಮೈದಾನಕ್ಕಿಳಿಯಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ವಿರಾಟ್ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
“ನಾವು ಒಂದೇ ದಾರಿಯಲ್ಲಿ ಸಾಗುತ್ತಿರುವಾಗ ಹಿಂದಿರುಗಿ ನೋಡುವ ಅಗತ್ಯವಿಲ್ಲ. ಮುಂದೆ ಸಾಗಿ” ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನು ಕ್ರಿಕೆಟ್ 23 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, ಅನೇಕರು ತಮ್ಮದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
No need to look back. As we move only one way – AHEAD. pic.twitter.com/EVP74qPV41
— Virat Kohli (@imVkohli) May 17, 2020
ವಿರಾಟ್ ಕೊಹ್ಲಿ ನಿನ್ನೆಯಷ್ಟೇ ತಮ್ಮ ಫಿಟ್ನೆಸ್ ತರಬೇತಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. “ನಿಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಒಂದು ಜೀವನ ವಿಧಾನವಾಗಿದೆ. ಆದರೆ ಪ್ರತಿಯೊಬ್ಬ ವೃತ್ತಿಪರರು ಇದನ್ನು ಮಾಡಬೇಕಾಗಿಲ್ಲ. ಆಯ್ಕೆ ನಿಮ್ಮದು” ಎಂದು ಬರೆದುಕೊಂಡಿದ್ದರು. ಈ ವಿಡಿಯೋದಲ್ಲಿ ವಿರಾಟ್ ಹಾಡು ಕೇಳುತ್ತಾ ರನ್ನಿಂಗ್ ಅಭ್ಯಾಸ ನಡೆಸಿದ್ದನ್ನು ಕಾಣಬಹುದು.
https://www.instagram.com/p/CANrpF8ljOW/?utm_source=ig_embed
ಅಷ್ಟೇ ಅಲ್ಲದೆ ವಿರುಷ್ಕಾ ಜೋಡಿ ಕ್ರಿಕೆಟ್ ಆಡುತ್ತಿದ್ದ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ವಿರಾಟ್ ಮುಂಬೈನ ತಮ್ಮ ಫ್ಲ್ಯಾಟ್ ಮುಂದಿನ ಖಾಲಿ ಜಾಗದಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರೆ, ಅನುಷ್ಕಾ ಬೌಲಿಂಗ್ ಮಾಡುವುದನ್ನು ನೋಡಬಹುದಾಗಿದೆ. ವಿರಾಟ್ ಗ್ಲೌಸ್ ಧರಿಸಿ ಅನುಷ್ಕಾ ಎಸೆದ ಬಾಲ್ ಅನ್ನು ಕವರ್ ಮತ್ತು ಸ್ಟ್ರೈಟ್ ಡ್ರೈವ್ ಮಾಡಿದ್ದರು.
ಈ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ತಂಡದ ಜೊತೆಗೆ ನೆಟ್ ಅಭ್ಯಾಸ ಹಾಗೂ ಮುಂಬರುವ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದ್ದಾರೆ. ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ 86 ಟೆಸ್ಟ್ ಪಂದ್ಯಗಳಲ್ಲಿ 7,240 ರನ್, 248 ಏಕದಿನ ಪಂದ್ಯಗಳಲ್ಲಿ 11,867 ರನ್ ಮತ್ತು 81 ಟಿ20 ಪಂದ್ಯಗಳಲ್ಲಿ 2,794 ರನ್ ಗಳಿಸಿದ್ದಾರೆ. ಐಪಿಎಲ್ನ 177 ಪಂದ್ಯಗಳಲ್ಲಿ ಅವರು 5,412 ರನ್ ದಾಖಲಿಸಿದ್ದಾರೆ.
Finally after soo much long time saw Virat Batting ????
Virat Anushka playing cricket in building today????
Anushka bowls a Bouncer to Virat????#ViratKohli #AnushkaSharma #Cricket pic.twitter.com/XFmfs3hiBt
— Virarsh (@Cheeku218) May 15, 2020