ಹಾಸನಾಂಬೆ ದೇವಾಲಯ ಓಪನ್- ಕೇವಲ ವಿವಿಐಪಿಗಳಿಗಷ್ಟೇ ದರ್ಶನ

Public TV
1 Min Read
HSN TEMPLE

-ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರ ಆಕ್ರೋಶ

ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಿ ದೇಗುಲದ ಬಾಗಿಲು ತೆರೆಯಲಾಗಿದ್ದು, ದೇವಾಲಯದ ಎದುರು ಬಾಳೆಕಂದು ಕಡಿದ ತಕ್ಷಣ ಗರ್ಭಗುಡಿಯ ಬಾಗಿಲನ್ನು ಇಂದು ಮಧ್ಯಾಹ್ನ 12 ಗಂಟೆಗೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು.

ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಹಾಸನಾಂಬೆ ದರ್ಶನಕ್ಕೆ ಭಕ್ತಾದಿಗಳಿಗೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ದೇವರ ದರ್ಶನಕ್ಕೆ ಕೇವಲ ವಿವಿಐಪಿಗಳಿಗೆ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕರವೇ ಹಾಸನಾಂಬ ದೇವಾಲಯದ ಎದುರು ಮೌನ ಪ್ರತಿಭಟನೆ ನಡೆಸಿತು. ಭೇದಭಾವ ಮಾಡದೇ ಎಲ್ಲರಿಗೂ ದರ್ಶನದ ವ್ಯವಸ್ಥೆ ಮಾಡಿಕೊಡಿ. ಇಲ್ಲದಿದ್ದರೆ ಯಾರಿಗೂ ದರ್ಶನಕ್ಕೆ ಅವಕಾಶ ಕೊಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

HSN TEMPLE a

ನಾಳೆ ದೇವಿಗೆ ಆಭರಣ ಧಾರಣೆ ನಂತರ 11 ದಿನಗಳ ಕಾಲ ನಿರಂತರ ಪೂಜೆ ನಡೆಸಲಾಗುತ್ತದೆ. ಈಗಾಗಲೇ ಜಿಲ್ಲಾಡಳಿತ ಖಜಾನೆಯಿಂದ ತರಲಾಗಿರುವ ಅಮ್ಮನವರ ಒಡವೆ ತರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ. ದೇಗುಲದ ಬಾಗಿಲು ಓಪನ್ ಮಾಡುವ ವೇಳೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತಿ ಇದ್ದರು.

ಹಾಸನಾಂಬೆ ದರ್ಶನ ಬಳಿಕ ಮಾತನಾಡಿದ ಸಚಿವ ಗೋಪಾಲಯ್ಯ ಅವರು, ಇಂದು ಹಾಸನಾಂಬೆ ದರ್ಶನ ಪಡೆದಿದ್ದೇನೆ. ನಾನು ನೋಡಿದಾಗ ದೇವಾಲಯದ ಗರ್ಭಗುಡಿಯಲ್ಲಿ ಎರಡೂ ದೀಪಗಳು ಉರಿಯುತ್ತಿತ್ತು. ನಾನು ಪ್ರತಿವರ್ಷ ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡುತ್ತೇನೆ. ಆದರೆ ಈ ಬಾರಿ ನಾನೇ ಸಚಿವನಾಗಿದ್ದು ದೇವಾಲಯದ ಬಾಗಿಲು ತೆರೆಯುವಾಗ ಇದ್ದಿದ್ದು ನನ್ನ ಪುಣ್ಯ. ಮುಖ್ಯಮಂತ್ರಿಗಳು ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದರು.

HSN TEMPLE b.

ಕೋವಿಡ್ ಕಾರಣದಿಂದ ಭಕ್ತರಿಗೆ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ದೇವಿಯ ದರ್ಶನ ಮಾಡಲು ಹಾಸನದ 10 ಕಡೆ ಎಲ್‍ಇಡಿ ಪರದೆ ಅಳವಡಿಸಲಾಗಿದೆ. ಅಲ್ಲಿ ಭಕ್ತರು ದೇವಿಯ ದರ್ಶನ ಪಡೆಯಬಹುದು. ಉಳಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು http://hasanambalive2020.com/Home.aspx ಲಿಂಗ್ ಮೂಲಕ ಆನ್‍ಲೈನ್‍ನಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದೆ.

HSN TEMPLE c

Share This Article
Leave a Comment

Leave a Reply

Your email address will not be published. Required fields are marked *