– ಯಾವುದೇ ಚಿಕಿತ್ಸೆಯಿಲ್ಲದೇ ನೆಲದಲ್ಲಿ ಮಲಗಿರುವ ಕಾರ್ಮಿಕರು
ಹಾಸನ: ಜಿಲ್ಲೆಯ ಹಿಮತ್ ಸಿಂಗ್ ಕಾರ್ಖಾನೆಯ 130 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಹಾಸನ ಜಿಲ್ಲೆಗೆ ಕಂಟಕವಾಗಿ ಪರಿಣಮಿಸಿದೆ.
ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾರ್ಖಾನೆಯ ಕಾರ್ಮಿಕರನ್ನು ಕೊರೊನಾ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ವರದಿಯಲ್ಲಿ ಸುಮಾರು 130 ಜನರಿಗೆ ಕೊರೊನಾ ಸೋಂಕು ಇರುವುದು ಕಂಡು ಬಂದಿದೆ. ಸದ್ಯ ಈ ಕಾರ್ಖಾನೆಯಲ್ಲಿ 2,500ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದು, ಮತ್ತಷ್ಟು ಸೋಂಕು ಹೆಚ್ಚಾಗುವ ಲಕ್ಷಣ ಕಂಡು ಬಂದಿದೆ.
Advertisement
Advertisement
ಈ ಕಾರ್ಖಾನೆಯ ಕೇವಲ 420 ಜನರಿಗೆ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ಇವರ ಪೈಕಿ ಬರೋಬ್ಬರಿ 130 ಜನಿರಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೂ ಸಾವಿರಾರು ಕಾರ್ಮಿಕರಿಗೆ ಕೊರೊನಾ ಟೆಸ್ಟ್ ಬಾಕಿಯಿದ್ದು, ಸೋಂಕು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಈಗ ಪಾಸಿಟಿವ್ ಬಂದಿರುವ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ನೀಡದೆ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ.
Advertisement
Advertisement
ಕೊರೊನಾ ಸೋಂಕು ಕಂಡು ಬಂದ ಕಾರ್ಮಿಕರನ್ನು ಯಾವುದೇ ಚಿಕಿತ್ಸೆ ಇಲ್ಲದೆ ನೆಲದ ಮೇಲೆ ಮಲಗಿಸಲಾಗಿದೆ. ಒಂದೇ ಹಾಲ್‍ನಲ್ಲಿ 50ಕ್ಕೂ ಹೆಚ್ಚು ಪಾಸಿಟಿವ್ ಬಂದ ಕಾರ್ಮಿಕರನ್ನು ಕೂಡಿಹಾಕಲಾಗಿದೆ. ಕನಿಷ್ಟ ವ್ಯವಸ್ಥೆಯೂ ಇಲ್ಲದೇ ಕಂಗಾಲದ ಕಾರ್ಮಿಕರು ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಆಸ್ಪತ್ರೆಯ ಗೇಟ್ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.