– ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ
ಹಾಸನ: ಜಿಲ್ಲೆಯಲ್ಲಿ ತಾಯಿ, ಮಗ ಹಾಗೂ ಮಗಳು ಸೇರಿದಂತೆ ಒಂದೇ ಕುಟುಂಬದ ಮೂವರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಇಂದು ಹಾಸನದ ಹೊಳೆನರಸೀಪುರ ಮೂಲದ 33 ವರ್ಷದ ಮಹಿಳೆ ಮತ್ತು ಆಕೆಯ 17 ವರ್ಷದ ಮಗಳು, 13 ವರ್ಷದ ಮಗನಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಮೂವರು ಮೇ 16ರಂದು ಕ್ವಾಲಿಸ್ ಕಾರಿನಲ್ಲಿ ಮುಂಬೈನಿಂದ ಹಾಸನಕ್ಕೆ ಬಂದಿದ್ದರು.
ಇವರ ಜೊತೆ ಕೆಆರ್ ನಗರ ಮೂಲದ ಇಬ್ಬರು ಪ್ರಯಾಣ ಬೆಳೆಸಿದ್ದರು. ಡ್ರೈವರ್ ಇವರನ್ನು ಹಾಸನಕ್ಕೆ ಬಿಟ್ಟು ವಾಪಸ್ ಮುಂಬೈಗೆ ಹೋಗಿದ್ದಾನೆ. ಹಾಸನದಲ್ಲಿ ಇದುವರೆಗೂ ಕಂಡುಬಂದಿರುವ 33 ಸೋಂಕಿತರು ಕೂಡ ಮುಂಬೈನಿಂದ ಹಾಸನಕ್ಕೆ ಬಂದವರಾಗಿದ್ದಾರೆ. 500 ಜನರ ಸ್ಯಾಂಪಲ್ಸ್ ವರದಿ ಬರುವುದು ಬಾಕಿಯಿದ್ದು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಮತ್ತಷ್ಟು ಹೆಚ್ಚಾಗುವ ಆತಂಕ ಮೂಡಿಸಿದೆ.