ಹಾಸನ: ದೇಶವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಹಾಸನ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರತಿ ದಿನ ನೂರಾರು ಪ್ರಕರಣ ದಾಖಲಾಗುತ್ತಿವೆ.
ಭಾನುವಾರವಾದ ಇಂದು ಒಂದೇ ದಿನ 142 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಮತ್ತೆ ಎರಡು ಸಾವು ಸಂಭವಿಸಿವೆ. ಇದುವರೆಗೂ ಜಿಲ್ಲೆಯಲ್ಲಿ 65 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ|| ಸತೀಶ್ ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಇಲ್ಲ – ಮೀನಿಗಾಗಿ ಮುಗಿಬಿದ್ದ ನೂರಾರು ಜನ
ಜಿಲ್ಲೆಯಲ್ಲಿ ಇದುವರೆಗೂ ಒಟ್ಟು 2,417 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 1,057 ಮಂದಿ ಗುಣಮುಖರಾಗಿ ವಾಪಸ್ ಮನೆಗೆ ಹೋಗಿದ್ದಾರೆ. 1,295 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಹಾಸನ ಜಿಲ್ಲೆಯಲ್ಲಿ ಭಾನುವಾರ ಎರಡು ಜನರು ಮೃತಪಟ್ಟಿದ್ದು, ಕೊರೊನಾದಿಂದ ಇದುವರೆಗೂ 65 ಜನರ ಸಾವು ಸಂಭವಿಸಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಜನ ಕೊರೊನಾದ ಬಗ್ಗೆ ಅರಿವೇ ಇಲ್ಲದೇ ನಡೆದುಕೊಳ್ಳುತ್ತಿರುವುದು ಮತ್ತಷ್ಟು ಆತಂಕ ಹೆಚ್ಚುಗುವಂತೆ ಮಾಡಿದೆ.