ಹಾವೇರಿ: ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದೆ. ಮೋಡಕವಿದ ವಾತಾವರಣದೊಂದಿಗೆ ಆಗಾಗ ತುಂತುರು ಮಳೆ ಆಗುತ್ತಿದೆ. ತುಂತುರು ಮಳೆಗೆ ಮನೆಯ ಹಳೆಯ ಗೋಡೆಗಳು ನೆನೆದು ಬಿದ್ದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದೆ.
ನೆರಗಲ್ ಗ್ರಾಮದ ತಿರಕಪ್ಪ ಗೋದಿ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಅರಳೇಶ್ವರ ಗ್ರಾಮದ ಗಂಗಯ್ಯ ಹಿರೇಮಠ ಹಾಗೂ ಹಾನಗಲ್ ತಾಲೂಕಿನ ಅಕ್ಕಿವಳ್ಳಿ ಗ್ರಾಮದ ರಾಜು ಪಗಡೆ ಎಂಬವರ ಮನೆಯ ಗೋಡೆ ನೆಲಕಚ್ಚಿದೆ. ಮೂರು ಮನೆಯ ಗೋಡೆಗಳು ಬಿದ್ದಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ತುಂತುರು ಮಳೆ ಮತ್ತು ಮೋಡಕವಿದ ವಾತಾವರಣ ಇರೋದ್ರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದನ್ನೂ ಓದಿ: ಗೆಳೆಯನ ಜೊತೆಗಿನ ಸುಂದರ ಕ್ಷಣವನ್ನು ಬೆಚ್ಚಿಟ್ಟ ರಿಷಿ
ಈಗಾಗಲೇ ಬಿತ್ತನೆ ಮಾಡಿರುವ ರೈತರಿಗೆ ತುಂತುರು ಮಳೆ ಅನುಕೂಲ ಆಗಿದ್ದರೆ, ಬಿತ್ತನೆಗಾಗಿ ಭೂಮಿ ಸಿದ್ಧಗೊಳಿಸಿಕೊಂಡಿದ್ದ ರೈತರಿಗೆ ಒಂದೆರಡು ದಿನಗಳ ಕಾಲ ಬಿತ್ತನೆ ಕಾರ್ಯ ಮಾಡದಂತೆ ಮಾಡಿದೆ. ಮತ್ತೊಂದೆಡೆ ಆಗಾಗ ಬೀಳುತ್ತಿರುವದಿಂದ ಮಳೆ ಗಿಡಮರಗಳಲ್ಲಿ ಹಸಿರು ಚಿಗುರುವಂತೆ ಮಾಡಿದೆ.