ಹಾವೇರಿ: ಜಿಲ್ಲೆಯಲ್ಲಿ ಇವತ್ತು ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನಾಲ್ವರೂ ಮಹಾರಾಷ್ಟ್ರದ ಥಾಣೆ ಜಿಲ್ಲೆಯಿಂದ ಬಂದಿದ್ದಾರೆ. ನಾಲ್ವರಲ್ಲಿ 11 ವರ್ಷದ ಬಾಲಕಿ, 19 ವರ್ಷದ ಯುವಕ, 13 ವರ್ಷದ ಬಾಲಕ ಹಾಗೂ 15 ವರ್ಷದ ಬಾಲಕನಿದ್ದಾನೆ.
ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎನ್ನಲಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ನಿವಾಸಿಗಳಾಗಿದ್ದು, ಥಾಣೆ ಜಿಲ್ಲೆಯ ಪಾಂಡಪಾಡ್ವಾದ ಕಲ್ವಾದಲ್ಲಿ ಬೀದಿ ಬದಿ ವ್ಯಾಪಾರ ಮಾಡಿಕೊಂಡಿದ್ದರು. ತುಮ್ಮಿನಕಟ್ಟಿ ಮೂಲದ 89 ಜನರು ಸೇರಿಕೊಂಡು ಮೇ 17 ರಂದು ಎರಡು ಬಸ್ ಗಳಲ್ಲಿ ಜಿಲ್ಲೆಗೆ ಬಂದಿದ್ದರು.
Advertisement
Advertisement
ಎಲ್ಲ ಪ್ರವಾಸಿ ಕಾರ್ಮಿಕರನ್ನು ರಾಣೆಬೆನ್ನೂರು ನಗರದ ಸರ್ಕಾರಿ ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ನಲ್ಲಿದ್ದವರ ಪೈಕಿ ಎರಡು ದಿನಗಳ ಹಿಂದೆ ನಾಲ್ವರಲ್ಲಿ ಸೊಂಕು ದೃಢಪಟ್ಟಿತ್ತು. ಇವತ್ತು ಮತ್ತೆ ನಾಲ್ವರಲ್ಲಿ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ.
Advertisement
Advertisement
ಹದಿನಾಲ್ಕರಲ್ಲಿ ಮೂವರು ಗುಣಮುಖರಾಗಿ ಕೋವಿಡ್ 19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ರೆ, 11 ಸಕ್ರಿಯ ಪ್ರಕರಣಗಳಿವೆ. ಕ್ವಾರಂಟೈನ್ ಮಾಡಿದ ಪ್ರದೇಶವನ್ನ ಸೀಲ್‍ಡೌನ್ ಮಾಡಲಾಗಿದೆ. ಅಲ್ಲದೆ ತುಮ್ಮಿನಕಟ್ಟಿ ಗ್ರಾಮದ ಸುತ್ತಮುತ್ತಲಿನ 7 ಕಿಲೋ ಮೀಟರ್ ಪ್ರದೇಶವನ್ನ ಬಂಪರ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.