ಹಾವೇರಿ: ಜಿಲ್ಲೆಯಲ್ಲಿ ಇಂದು 14 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಇದರಲ್ಲಿ ಮೂವರು ಕೆಎಸ್‍ಆರ್ ಟಿಸಿ ಬಸ್ ಚಾಲಕರು ಹಾಗೂ ಒರ್ವ ಪತ್ರಿಕಾ ವಿತರಕ ಸಹ ಇದ್ದಾರೆ.
Advertisement
ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಶಿರಗಂಬಿ ಗ್ರಾಮದ 48 ವರ್ಷದ ಕೆಎಸ್‍ಆರ್ ಟಿಸಿ ಬಸ್ ಚಾಲಕನಿಗೆ, ರಾಮತೀರ್ಥ ಗ್ರಾಮದ 30 ವರ್ಷದ ಬಸ್ ಚಾಲಕ ಹಾಗೂ ಹಿರೇಕೆರೂರಿನ 40 ವರ್ಷದ ಬಸ್ ಚಾಲಕರಲ್ಲಿ ಸೋಂಕು ಧೃಡಪಟ್ಟಿದೆ. ಇವರು ಹೊನ್ನಾಳಿಯಿಂದ ಹಿರೇಕೆರೂರಿಗೆ ಆಗಮಿಸಿದ್ದಾರೆ. ಎಲ್ಲರೂ ಶಿವಮೊಗ್ಗ ವಿಭಾಗಕ್ಕೆ ಸೇರಿದ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Advertisement
ರಾಣಿಬೆನ್ನೂರು ತಾಲೂಕಿನಲ್ಲಿ ಮೂವರಿಗೆ ಸೋಂಕು ದೃಡಪಟ್ಟಿದ್ದು, ಗೌರಿಶಂಕರ್ ನಗರದ 52 ವರ್ಷದ ಪತ್ರಿಕಾ ವಿತರಕರೊಬ್ಬರಿಗೆ ಸೋಂಕು ತಗುಲಿದೆ. ಹಾವೇರಿ, ಬ್ಯಾಡಗಿ ಮತ್ತು ಸವಣೂರು ತಾಲೂಕಿನ ತಲಾ ಇಬ್ಬರಿಗೆ ಕೊರೊನಾ ಧೃಡಪಟ್ಟಿದೆ. ಹಾನಗಲ್ ತಾಲೂಕಿನಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರು ವಾಸ ಇರುವ 100 ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಹಾಗೂ 200 ಮೀಟರ್ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.
Advertisement
Advertisement
ಹಾವೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 322ಕ್ಕೆ ಏರಿದೆ. ಸಕ್ರೀಯ ಪ್ರಕರಣಗಳು 118 ಇದ್ದು, ಈ ವರೆಗೆ 182 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು 29 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.