– ಪ್ರಾಣ ಬಿಡುವ ಮುನ್ನ ಮೃತದೇಹದಫೋಟೋ ವಾಟ್ಸಪ್ ಸ್ಟೇಟಸ್
ಮಂಗಳೂರು: ಹಾವು ಹಿಡಿದು ರಕ್ಷಣೆ ಮಾಡುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ನಿವಾಸಿ ಸ್ನೇಕ್ ಮುಸ್ತ ಹಾವು ಹಿಡಿಯುವ ವೇಳೆ ಹಾವು ಕಡಿತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
Advertisement
ಎಂ.ಆರ್. ಮುಸ್ತಾಫ ಸಾವನ್ನಪಿರುವ ವ್ಯಕ್ತಿಯಾಗಿದ್ದಾರೆ. ಇವರು ಉಪ್ಪಿನಂಗಡಿಯ 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಕಾಲನಿ ನಿವಾಸಿಯಾಗಿದ್ದಾರೆ. ಎಂ.ಆರ್. ಮುಸ್ತಾಫ ವೃತ್ತಿಯಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದು, ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು.
Advertisement
Advertisement
ಸ್ಥಳೀಯವಾಗಿ ಸ್ನೇಕ್ ಮುಸ್ತಾ ಎಂದೇ ಖ್ಯಾತಿಯಾಗಿದ್ದ ಮುಸ್ತಾಫರವರಿಗೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂತೆಂದು ಕರೆ ಬಂದಿತ್ತು. ಅದನ್ನು ಹಿಡಿದು ರಕ್ಷಿಸಲು ಅಲ್ಲಿಗೆ ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರ ಕೈಗೆ ಹಾವು ಕಚ್ಚಿದ್ದು, ತೀವ್ರ ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ಕರೆದೊಯ್ಯುವ ವೇಳೆ ಹಾದಿ ಮಧ್ಯೆ ಇವರು ಮೃತಪಟ್ಟಿದ್ದಾರೆ.
Advertisement
ಹಾವು ಹಿಡಿಯುವುದರಲ್ಲಿ ನಿಪುಣತೆಯನ್ನು ಹೊಂದಿದ್ದ ಇವರು ಸುಮಾರು ಸಾವಿರಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದು, ಇದಕ್ಕಾಗಿ ಹಲವು ಸಂಘ- ಸಂಸ್ಥೆಗಳು ಇವರನ್ನು ಗುರುತಿಸಿ ಗೌರವಿಸಿವೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಸ್ತಾಫ ಸಾವನ್ನಪ್ಪುವ ಕೆಲವೇ ಗಂಟೆಗಳ ಮೊದಲು ತನ್ನ ವಾಟ್ಸಪ್ ಸ್ಟೇಟಸ್‍ನಲ್ಲಿ ಮೃತದೇಹದ ಫೋಟೋcವೊಂದನ್ನು ಹಾಕಿ ಖಂಡಿತವಾಗಿಯೂ ತಾವು ಮರಣ ಹೊಂದುವಿರಿ ಮತ್ತು ಅವರೂ ಮರಣ ಹೊಂದುವರು ಎಂದು ಫೋಸ್ಟ್ ಮಾಡಿದ್ದು ಇದೀಗ ಎಲ್ಲರಿಗೂ ಅಚ್ಚರಿ ಮೂಡಿಸಿದೆ.