ಬೆಂಗಳೂರು: ನಟಿ ಅದಿತಿ ಪ್ರಭುದೇವ ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುತ್ತಾರೆ. ಈ ಹಿಂದೆ ರಾಗಿ ರೊಟ್ಟಿ ತಟ್ಟಿದ್ದ ಅದಿತಿ ಪ್ರಭುದೇವ ಇದೀಗ ಆಕಳಿನ ಹಾಲು ಕರೆದು, ಖಡಕ್ ರೊಟ್ಟಿ ಮಾಡಿದ್ದಾರೆ.
View this post on Instagram
ತಮ್ಮ ಊರಿನಲ್ಲಿ ಕಾಲ ಕಳೆದ ವೀಡಿಯೋವನ್ನು ತಮ್ಮದೇ ಹೊಸ ಯೂಟ್ಯೂಬ್ ಚಾನಲ್‍ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹಳ್ಳಿಯಲ್ಲಿ ಕಳೆದ ದಿನದ ಕುರಿತು ಪೋಸ್ಟ್ ಮಾಡಿದ್ದಾರೆ. ಕೊಟ್ಟಿಗೆ ಕಸ ಗೂಡಿಸುವುದರಿಂದ ಹಿಡಿದು, ಸಂಜೆ ಹಾಲು ಕರೆಯುವುದರ ವರೆಗಿನ ಚಟುವಟಿಕೆಗಳ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಇದೇ ಗ್ಯಾಪ್‍ನಲ್ಲಿ ರೊಟ್ಟಿಯನ್ನು ಸಹ ತಟ್ಟಿದ್ದಾರೆ.
View this post on Instagram
ಆರಂಭದಲ್ಲಿ ಕೊಟ್ಟಿಗೆ ಕಸ ಗೂಡಿಸಿ, ಸ್ವಚ್ಛ ಮಾಡಿ, ದನಕರುಗಳಿಗೆ ಮೇವು ಹಾಗುವುದು. ಹಸುಗಳಿಗೆ ಆಹಾರವನ್ನಿಟ್ಟು ಬಳಿಕ ಹಾಲು ಕರೆದಿದ್ದಾರೆ. ತಾವೇ ಕರೆದ ಹಸುವಿನ ಹಾಲನ್ನು ಕುಡಿದು ಆನಂದಿಸಿದ್ದಾರೆ. ಬಳಿಕ ಬೆಕ್ಕಿನೊಂದಿಗೆ ಆಟವಾಡಿ ಕಾಲ ಕಳೆದಿದ್ದಾರೆ.
View this post on Instagram
ಇದೆಲ್ಲ ಮುಗಿದ ಬಳಿಕ ಜೋಳದ ರೊಟ್ಟಿ ತಟ್ಟಿದ್ದು, ತಾವೇ ಮಾಡಿದ ಬಿಸಿ ಬಿಸಿ ಜೋಳದ ರೊಟ್ಟಿಯನ್ನು ಅವರೇ ಸವಿದು ಖುಷಿಪಟ್ಟಿದ್ದಾರೆ. ನಾನು ಮಾಡಿದ ರೊಟ್ಟಿಯನ್ನು ನಾನೇ ತಿನ್ನುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ವಿಶೇಷ ಎಂದರೆ ಅದಿತಿ ಪ್ರಭುದೇವ ಅವರು ಗ್ಯಾಸ್ ಮೇಲೆ ರೊಟ್ಟಿ ಮಾಡಿದ್ದಲ್ಲ, ಬದಲಿಗೆ ಒಲೆ ಹೊತ್ತಿಸಿ, ಹಂಚು ಕಾಯಿಸಿ ಬಿಸಿ ಬಿಸಿ ರೊಟ್ಟಿ ತಯಾರಿಸಿದ್ದಾರೆ. ನಾಯಿ ಜೊತೆ ಕುಳಿತು, ನೆಚ್ಚಿನ ನಾಯಿಗೂ ರೊಟ್ಟಿ ತಿನ್ನಿಸಿ, ತಾವೂ ಸವಿದಿದ್ದಾರೆ.
View this post on Instagram
ಬಳಿಕ ಚಕ್ಕಡಿಗಳೆಲ್ಲ ಹೊಲದ ಕೆಲಸ ಮಾಡಲು ಬಂದಿವೆ. ಹೀಗಾಗಿ ಅನಿವಾರ್ಯವಾಗಿ ತಮ್ಮನ ಜೊತೆ ಕಾರ್‍ನಲ್ಲಿ ಹೊರಟಿದ್ದೇವೆ ಎಂದಿದ್ದಾರೆ. ಅಲ್ಲದೆ ಹೊಲಕ್ಕೆ ತೆರಳಿ ಟ್ರ್ಯಾಕ್ಟರ್ ಸಹ ಚೆಲಾಯಿಸಿದ್ದು, ಹಳ್ಳಿ ಜೀವನದ ಅನುಭವನ್ನು ಸವಿದಿದ್ದಾರೆ. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ತಮ್ಮದೇ ಯೂಟ್ಯೂಬ್ ಚಾನಲ್ ತೆರೆದಿದ್ದು, ಇದರ ಮೂಲಕ ಕ್ರಾಫ್ಟ್, ಆರ್ಟ್ ಸೇರಿದಂತೆ ವಿವಿಧ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.