ನವದೆಹಲಿ: ಕ್ರಿಕೆಟಿಗ್ ಹಾರ್ದಿಕ್ ಪಾಂಡ್ಯ ಅವರ ತಂದೆ ಹಿಮಾಂಶು ಪಾಂಡ್ಯಾ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಇಂದು ಬೆಳಗ್ಗೆ ಹೃದಯಾಘಾತದಿಂದ ಹಿಮಾಂಶು ಅವರ ನಿಧನವಾಗಿದೆ ಎಂದು ವರದಿಯಾಗಿದೆ. ಹಾರ್ದಿಕ್ ಸೋದರ ಕೃನಾಲ್ ಪಾಂಡ್ಯಾ ಸೈಯದ್ ಮುಷ್ತಾಕ್ ಅಲಿ ಟಿಟ್ವೆಂಟಿ ಪಂದ್ಯದಲ್ಲಿ ಆಡುತ್ತಿದ್ದಾರೆ. ತಂದೆಯ ನಿಧನದ ಸುದ್ದಿ ತಿಳಿದು ಕೂಡಲೇ ಊರಿನತ್ತ ಕೃಣಾಲ್ ಪ್ರಯಾಣ ಬೆಳೆಸಿದ್ದಾರೆ.
ಆರ್ಥಿಕ ಸಂಕಷ್ಟದ ನಡುವೆಯೂ ಮಕ್ಕಳಿಬ್ಬರನ್ನು ಕ್ರಿಕೆಟ್ ಅಕಾಡೆಮಿಗೆ ಸೇರಿಸಿದ್ದರು. ಹಲವು ಸಂದರ್ಶನಗಳಲ್ಲಿ ಹಾರ್ದಿಕ್ ತಮ್ಮ ತಂದೆ ತಮಗಾಗಿ ಪಟ್ಟ ಕಷ್ಟವನ್ನ ಹೇಳಿಕೊಂಡಿದ್ದರು. ಇಂದಿನ ನಮ್ಮ ಈ ಸ್ಥಿತಿಗೆ ತಂದೆಯೇ ಕಾರಣ ಸಹ ಅಂದಿದ್ದರು. ಫಾದರ್ಸ್ ಡೇ ಯಂದು ತಂದೆ ಮತ್ತು ಸೋದರನ ಜೊತೆಗಿನ ಫೋಟೋ ಸಹ ಹಂಚಿಕೊಂಡಿದ್ದರು.