ವಿಜಯಪುರ: ಹಾಡ ಹಗಲೇ ಕತ್ತು ಕುಯ್ದು ವೃದ್ಧನ ಬರ್ಬರವಾಗಿ ಕೊಲೆ ಮಾಡಲಾಗಿದೆ.
ನಗರದ ಗೋಡಬೊಳೆ ಮಾಳಾದಲ್ಲಿನ ಮನೆಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿದ್ದ ವೃದ್ಧನನ್ನು ಮಾರಕಾಸ್ತ್ರಗಳಿಂದ ಕತ್ತು ಕುಯ್ದ ಕೊಲೆಗೈಯ್ಯಲಾಗಿದೆ. 68 ವರ್ಷದ ವಿನಯ್ ನಾಯಕ್ ಕೊಲೆಗೀಡಾದ ವೃದ್ಧನಾಗಿದ್ದು, ಮನೆಯವರು ಹೊರಗೆ ಹೋಗಿದ್ದ ವೇಳೆ ಕೃತ್ಯ ನಡೆದಿದೆ. ಮನೆಯವರು ವಾಪಸ್ ಬಂದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಳ್ಳತನ ಮಾಡಲು ವೃದ್ಧನ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಎಸ್‍ಪಿ ಅನುಪಮ ಅಗರ್‍ವಾಲ್ ಹಾಗೂ ಗಾಂಧಿಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.