– ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಬೆಂಗಳೂರು: ಇಬ್ಬರು ಖದೀಮರು ಹಾಡಹಗಲೇ ಮನೆಯ ಗೇಟ್ ಒಡೆದು, ಕಳ್ಳತನ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಯಾರು ಇಲ್ಲದ್ದನ್ನು ಮನಗಂಡ ಖದೀಮರು, ರಾಡ್ ಹಿಡಿದು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ 30 ಗ್ರಾಂ. ಚಿನ್ನ ಮತ್ತು 5 ಲಕ್ಷ ರೂ.ಹಣವನ್ನು ಎಗರಿಸಿದ್ದಾರೆ.
ಇಂದು ಮಧ್ಯಾಹ್ನ ಘಟನೆ ನಡೆದಿದ್ದು, ಆರಂಭದಲ್ಲಿ ಮನೆಯಲ್ಲಿ ಯಾರಾದರೂ ಇದ್ದಾರಾ ಎಂಬುದನ್ನು ಕಳ್ಳರು ಪರಿಶೀಲಿಸಿದ್ದಾರೆ. ಬಳಿಕ ಯಾರೂ ಇಲ್ಲದ್ದನ್ನು ಮನಗಂಡು ಸ್ಕೆಚ್ ಹಾಕಿ ಕಳ್ಳತನ ಮಾಡಿದ್ದಾರೆ. ಕಳ್ಳರ ಕೈಚಳಕ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗೇಟ್‍ಗೆ ಹಾಕಿದ್ದ ಬೀಗವನ್ನು ಆರಂಭದಲ್ಲಿ ರಾಡ್ ಮೂಲಕ ಮುರಿಯುವ ಖದೀಮರು, ನಂತರ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು, ಮನೆಯನ್ನು ನೋಡಿ ಆಸುಪಾಸು ಯಾರೂ ಇಲ್ಲದ್ದನ್ನು ಕಂಡು ಗೇಟ್ ಬೀಗ ಮುರಿದು ಮನಗೆ ನುಗ್ಗಿದ್ದಾರೆ. ಆರಂಭದಲ್ಲಿ ಒಬ್ಬ ಮಾತ್ರ ಮನೆ ಬಳಿ ಬಂದಿದ್ದು, ಯಾರಾದಾರೂ ಇದ್ದಾರಾ ಎಂದು ಪರಿಶೀಲಿಸಿ ಬಳಿಕ ಮತ್ತೊಬ್ಬನನ್ನು ಕರೆಯುತ್ತಾನೆ. ಬಳಿಕ ಇಬ್ಬರೂ ಕೃತ್ಯ ಎಸಗುತ್ತಾರೆ. ಕಳ್ಳರು ಎಂಟ್ರಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗುದೆ.