ಮಡಿಕೇರಿ: ಕ್ರೀಡಾ ಜಿಲ್ಲೆ ಆಗಿರುವ ಕೊಡಗು ಇದೀಗ ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ರಾಷ್ಟ್ರದ ಗಮನ ಸೆಳೆಯುತ್ತಿದೆ. ಕೊಡಗಿನ ಹಾಕಿ ಕಲಿಯೊಬ್ಬರು ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಸೀನಿಯರ್ ಮಹಿಳಾ ಹಾಕಿ ತಂಡದ ಕೋಚ್ ಆಗಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವಿಚಾರ – ಒಂದು ವಾರ ಕಾಯಿರಿ: ಡಿಕೆಶಿ
ಅಂಕಿತಾ ಸುರೇಶ್ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಹೊನ್ನಂಪಾಡಿ ನಿವಾಸಿಯಾಗಿದ್ದಾರೆ. ಈ ಸಲದ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಕೋಚ್ ಅಂಕಿತಾ ಅವರನ್ನೊಳಗೊಂಡ ಭಾರತದ ಮಹಿಳಾ ಹಾಕಿ ತಂಡ ಟೋಕಿಯೋಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ನಮ್ಮಂಥ ಸಿಎಂ ಯಾವ ರಾಜ್ಯದಲ್ಲೂ ಇಲ್ಲ: ಸೋಮಶೇಖರ್ ರೆಡ್ಡಿ
ಅಂಕಿತಾ ಅವರ ಕೋಚಿಂಗ್‍ನಲ್ಲಿ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡು ಬರಲಿ ಎಂಬುದು ಕೊಡಗಿನ ಜನತೆಯ ಹಾರೈಕೆ ಆಗಿದೆ. ಅಂಕಿತ ಅವರು ಕಂಬಿಬಾಣೆಯ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿಯಾಗಿದ್ದಾರೆ. ದೇಶಕ್ಕೆ ಜಿಲ್ಲೆಗೆ ಹೆಸರು ತರಲಿ ಎಂದು ಕ್ರೀಡಾ ತವರು ಕೊಡಗು ಜಿಲ್ಲೆ ಜನರ ಆಶಾಯವಾಗಿದೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಶ್ರುತಿ ಹಾಸನ್ ಕಿಸ್