ಹಾವೇರಿ: ಕೊರೊನಾ ಅರ್ಭಟಕ್ಕೆ ಹಾವೇರಿ ಜಿಲ್ಲೆಯಲ್ಲಿ ಎರಡನೇ ದಿನ ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ. ಸಂಪೂರ್ಣ ಬಂದ್ ಆಗಿದ್ದರಿಂದ ವಾಹನಗಳ ಓಡಾಟವಿರಲಿಲ್ಲ. ಮಗುವನ್ನ ಎತ್ತಿಕೊಂಡು ಆಸ್ಪತ್ರೆಗೆ ಹೊರಟಿದ್ದ ಮಹಿಳೆಗೆ ಡ್ರಾಪ್ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದ ಬಳಿ ಎರಡು ತಿಂಗಳ ಮಗುವನ್ನ ಎತ್ತಿಕೊಂಡು ಮಹಿಳೆ ನಡೆದುಕೊಂಡು ಹೊರಟಿದ್ದರು. ಉದಯನಗರದಿಂದ ಖಾಸಗಿ ಆಸ್ಪತ್ರೆಗೆ ಮನೆಯಿಂದ ಮೂರು ಕಿ.ಮೀ ದೂರವಿರುವ ಆಸ್ಪತ್ರೆಗೆ ಹೊರಟಿದ್ದರು.
ಕಂಪ್ಲೀಟ್ ಲಾಕ್‍ಡೌನ್ ಆಗಿದ್ದರಿಂದ ವಾಹನಗಳ ಓಡಾಟವಿರಲಿಲ್ಲ. ಹೀಗಾಗಿ ಮಹಿಳೆ ಹಸುಗೂಸನ್ನ ಹಿಡಿದು ಆಸ್ಪತ್ರೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ ಪಿಎಸ್ ಐ ಪ್ರಕಾಶ ನಂದಿ ಹಾಗೂ ಸಿಬ್ಬಂದಿ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಬಿಟ್ಟು ಪೊಲೀಸರು ಮಾನವೀಯತೆ ಮೆರೆದಿದ್ದಾರೆ.