ಬೆಳಗಾವಿ: ಪರಿಸರ ನಾಶ ಮಾಡುವ ಮೂಲಕ ಇಂದಿನ ದಿನಗಳಲ್ಲಿ ಶುದ್ಧ ಆಕ್ಸಿಜನ್ ಇಲ್ಲದೆ ಜನರು ಪರದಾಡುವಂತಾಗಿದೆ. ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಮಾನವ ಹೊರಟಿರುವುದು ದುರದೃಷ್ಟಕರ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಹಶೀಲ್ದಾರ್ ದುಂಡಪ್ಪಾ ಕೋಮಾರ ಕಳವಳ ವ್ಯಕ್ತಪಡಿಸಿದರು.
ಅಥಣಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕ ಮತ್ತು ರಾಜ್ಯ ಗ್ರಾಮ ಸಹಾಯಕರ ತಾಲೂಕು ಘಟಕದ ಸಹಯೋಗದೊಂದಿಗೆ ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಬೆಳೆಸೋಣ, ಶುದ್ಧ ಜೀವ ವಾಯು ಪಡೆಯೋಣ, ದೇಶದಲ್ಲಿ ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಮಾನವ ಹೊರಟಿರುವುದು ದುರದೃಷ್ಟಕರವಾಗಿದ್ದು, ಕಾಡನ್ನು ನಾಶ ಮಾಡುವುದನ್ನು ಜನರು ನಿಲ್ಲಿಸಬೇಕು ಎಂದರು.
ಕಾಡು ಉಳಿದರೆ ನಾಡು ಉಳಿದಿತು. ಒಂದು ಒಳ್ಳೆಯ ದೇಶ ಕಟ್ಟಬೇಕಾದರೆ ಸಮೃದ್ಧ ಪರಿಸರ ಕಾಡು ಅವಶ್ಯಕವಾಗಿದೆ. ದೇಶವನ್ನು ಉಳಿಸಬೇಕಾದರೆ ಕಾಡನ್ನು ಬೆಳೆಸುವುದು ಉತ್ತಮ ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ ಆದ್ದರಿಂದ ಮನುಷ್ಯ ಜೀವಿ ಈಗಲೇ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸಲು ಮುಂದಾಗುವಂತೆ ಜನರಲ್ಲಿ ವಿನಂತಿಸಿದರು. ಇದನ್ನೂ ಓದಿ: ಬಾವಿ ಕಳೆದಿದೆ – ದೂರು ದಾಖಲಿಸಿದ ರೈತ
ಉಪ ತಹಶೀಲ್ದಾರ್ ಮಹಾದೇವ ಬಿರಾದಾರ್ ಪಾಟೀಲ್ ಮಾತನಾಡಿ, ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇದನ್ನು ಪ್ರತಿ ನಾಗರಿಕನು ಪಾಲಿಸುವಂತಾಗಬೇಕು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಂದಾಯ ಇಲಾಖೆ ದಿನಾಚರಣೆ ಪ್ರಯುಕ್ತ, ಗ್ರಾಮ ಲೆಕ್ಕಾಧಿಕಾರಿ ಗ್ರಾಮ ಸಹಾಯಕರು ಸೇರಿದಂತೆ ತಾಲೂಕು ಆಡಳಿತದ ಪ್ರತಿಯೊಬ್ಬ ನೌಕರಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಿಸರ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಪರಿಸರದಿಂದ ಹಸಿರು ಪರಿಸರದಿಂದಲೇ ಉಸಿರು ಆಗಿದೆ ಹಾಗಾಗಿ ನಾವು ನಾಡನ್ನು ಉಳಿಸುವಂತೆ ಕಾಡನ್ನು ಉಳಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಿರಸ್ಥೆದಾರರಾದ ಸಿ.ಎಸ್ ಕಬಾಡೆ ಢವಳೇಶ್ವರ, ಅರಣ್ಯ ಇಲಾಖೆಯ ಮಂಜುನಾಥ್ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಎಮ್.ಎಮ್ ಮಿರ್ಜಿ ಉಪಸ್ಥಿತರಿದ್ದರು.