ಕೊಡಗು: ಮಡಿಕೇರಿ ನಗರಸಭಾ ವ್ಯಾಪ್ತಿಯ ಸ್ಟೋನ್ ಹಿಲ್ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಸಿಕಸ ಸಂಸ್ಕರಣಾ ಯೋಜನೆಗೆ (ತ್ಯಾಜ್ಯದಿಂದ ಗೊಬ್ಬರ ತಯಾರಿಸುವ ವಿಧಾನ) ಶಾಸಕರಾದ ಎಂ.ಪಿ ಅಪ್ಪಚ್ಚುರಂಜನ್ ಅವರು ಇಂದು ಚಾಲನೆ ನೀಡಿದರು.
Advertisement
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಚ್ಚುರಂಜನ್ ಅವರು, 30.50 ಲಕ್ಷ ರೂ. ವೆಚ್ಚದಲ್ಲಿ ಹಸಿಕಸ ಸಂಸ್ಕರಣಾ ಘಟಕ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ಯಶಸ್ವಿಯಾದಲ್ಲಿ ಹೆಚ್ಚಿನ ಘಟಕ ನಿರ್ಮಿಸಲಾಗುವುದು, ಮಡಿಕೇರಿ ನಗರದಲ್ಲಿ ತ್ಯಾಜ್ಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಸ್ವಚ್ಛ ಪರಿಸರವನ್ನು ನಿರ್ಮಿಸಲು ಶ್ರಮಿಸಬೇಕು. ಹಸಿ ಕಸವನ್ನು ಗೊಬ್ಬರವನ್ನಾಗಿ ಮಾಡುವ ನಿಟ್ಟಿನಲ್ಲಿ ಪೈಲೆಟ್ ಮಾದರಿಯಲ್ಲಿ ಯೋಜನೆ ರೂಪಿಸಲಾಗುವುದು ಎಂದು ಶಾಸಕರು ಹೇಳಿದರು. ಇದನ್ನೂ ಓದಿ: ಕೊಡಗಿನಲ್ಲಿ ಭಾರೀ ಮಳೆ- ಮುಕ್ಕೋಡ್ಲು ತಂತಿಪಾಲದಲ್ಲಿ ಭೂಕುಸಿತ, ಅಪ್ಪಚು ರಂಜನ್ ಭೇಟಿ
Advertisement
Advertisement
2020-21 ನೇ ಸಾಲಿನ 15ನೇ ಹಣಕಾಸು ಆಯೋಗದಲ್ಲಿ 30.50 ಲಕ್ಷ ರೂ. ವೆಚ್ಚದಲ್ಲಿ 3 ಘಟಕ ಒಳಗೊಂಡಿರುವ ಯೋಜನೆಯಲ್ಲಿ ಪ್ರತೀ ದಿನ ಒಂದು ಘಟಕದಲ್ಲಿ 400 ರಿಂದ 450ಕೆ.ಜಿ ಹಸಿಕಸವನ್ನು ಸಂಸ್ಕರಿಸಬಹುದಾಗಿದೆ ಎಂದು ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ಮಾಹಿತಿ ನೀಡಿದರು.
Advertisement
ಗ್ರೀನ್ ರಿಚ್ ಗ್ರೊ ಇಂಡಿಯಾ ಸಂಸ್ಥೆಯ ಸುರೇಶ್ ನಾಯರ್ ಅವರು ಹಸಿಕಸದಿಂದ ಗೊಬ್ಬರ ಮಾಡುವಲ್ಲಿ ಗ್ರೀನ್ ಗ್ರೊ ಸಂಸ್ಥೆಯು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. 30 ದಿನದ ನಂತರ ಗೊಬ್ಬರವನ್ನು ನೈಸರ್ಗಿಕ ಕೃಷಿಗೆ ಬಳಸಬಹುದಾಗಿದೆ ಎಂದರು.