– ಚಿಗುರು ಮೀಸೆ ಯುವಕರಿಂದ ಕೊಲೆ
ಚಿಕ್ಕಬಳ್ಳಾಪುರ: ಸೈಯ್ಯದ್ ಫರ್ಮಾನ್ ಎಂಬಾತನ ಕೊಲೆ ಪ್ರಕರಣದ ಆರೋಪಿಯನ್ನ ಬಂಧಿಸುವಲ್ಲಿ ಶಿಡ್ಲಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಶಿಡ್ಲಘಟ್ಟ ಪಟ್ಟಣ ಹೊರವಲಯದ ಹನುಮಂತಪುರ ಗ್ರಾಮದ ಬಳಿಯ ಬಡವಾಣೆಯಲ್ಲಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ 25 ವರ್ಷದ ಯುವಕ ಸಯ್ಯದ್ ಫರ್ಮಾನ್ ಶವ ಪತ್ತೆಯಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ (20) ಬಂಧನವಾಗಿದ್ದು, ಮತ್ತೋರ್ವ ನವಾಜ್ (20) ನಾಪತ್ತೆಯಾಗಿದ್ದಾನೆ.
ಮೃತ ಸಯ್ಯದ್ ಫರ್ಮಾನ್ ಬೆಂಗಳೂರಿನಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಬಂದು ಸ್ವಗ್ರಾಮ ಶಿಡ್ಲಘಟ್ಟ ಪಟ್ಟಣದಲ್ಲಿ ತನ್ನ ಅಣ್ಣನ ರೇಷ್ಮೆ ರಿಲಿಂಗ್ ಕೆಲಸ ಮಾಡಿಕೊಂಡಿದ್ದನು. ಇದೇ ಸಯ್ಯದ್ ಫರ್ಮಾನ್ ಏರಿಯಾದಲ್ಲಿ ಕೊಲೆ ಆರೋಪಿಗಳಾದ ಮನ್ಸೂರ್ ಆಲಿಯಾಸ್ ಚಿಲ್ಲು ಹಾಗೂ ನವಾಜ್ ವಾಸವಾಗಿದ್ದರು. ಈ ಇಬ್ಬರು ಮಾಡೋಕೆ ಕೆಲಸ ಇಲ್ಲದೆ ಉಂಡಾಡಿ ಗುಂಡರಂತೆ ಏರಿಯಾದಲ್ಲಿ ಅಡ್ಡಾಡಿಕೊಂಡು ಯುವ ರೌಡಿಗಳಂತೆ ಹವಾ ಮೈಂಟೈನ್ ಮಾಡಿಕೊಂಡು ಒಡಾಡುತ್ತಿದ್ದರು.
ಇವರಿಬ್ಬರ ಪುಂಡಾಟಗಳನ್ನ ನೋಡ್ತಿದ್ದ ಫರ್ಮಾನ್, ಮನಸೂರ್ ಹಾಗೂ ನವಾಜ್ ರನ್ನ ಕಂಡಗಲೆಲ್ಲಾ ಹತ್ತಿರ ಕರೆದು ಅವಾಜ್ ಹಾಕಿ ಬೆದರಿಕೆ ಹಾಕ್ತಿದ್ದನಂತೆ. ಇವರು ಕಂಡಾಗಲೆಲ್ಲಾ ಏಯ್ ಏನ್ರೋ ನೀವ್ ಹವಾ ಮೈಂಟೇನ್ ಮಾಡ್ತೀರಾ? ಬಿಟ್ರೆ ನೋಡು ಅಂತ ಹೊಡೆಯೋಕು ಹೋಗ್ತಿದ್ದನಂತೆ. ಇದರಿಂದ ಕುಪಿತಗೊಂಡ ಮನ್ಸೂರ್ ಹಾಗೂ ನವಾಜ್ ಸಯ್ಯದ್ ಫರ್ಹಾನ್ ಕೊಲೆಗೆ ಸ್ಕೆಚ್ ಹಾಕಿದ್ದರು.
ಫೆಬ್ರವರಿ 07 ರಂದು ಸಹ ಇದೇ ರೀತಿ ಸಯ್ಯದ್ ಫರ್ಮಾನ್ ಅವಾಜ್ ಹಾಕಿದ್ದನು. ಈ ವೇಳೆ ಪ್ಲಾನ್ ಮಾಡಿದ ಮನ್ಸೂರ್ ಹಾಗೂ ನವಾಜ್ ಮೊದಲೇ ಮದ್ಯಸೇವಿಸಿ ಅಮಲಿನಲ್ಲಿದ್ದ ಸಯ್ಯದ್ ಫರ್ಮಾನ್ ಬಳಿ ಹೋಗಿ ಅಣ್ಣ ಇನ್ನೂ ಮೇಲೆ ನಮಗೆ ನಿಮಗೆ ಜಗಳ ಬೇಡ. ನಮಗೆ ಅವನ್ಯಾರು ಬೇರೆಯವನು ಅವಾಜ್ ಹಾಕ್ತಿದ್ದಾನೆ. ಬನ್ನಿ ಅವನಿಗೆ ನಾವು ನೀವು ಹೋಗಿ ಅವಾಜ್ ಹಾಕೋಣ ಅಂತ ನಿರ್ಜನ ಪ್ರದೇಶದ ನಿರ್ಮಾಣ ಹಂತದ ಕಟ್ಟಡದ ಬಳಿ ಕರೆದುಕೊಂಡು ಹೋಗಿ ಅಲ್ಲಿ ಮರ್ಡರ್ ಮಾಡಿದ್ದಾರೆ.
ಮೊದಲೇ ಚಿಕನ್ ಅಂಗಡಿಯಲ್ಲಿ ಎತ್ತಿಕೊಂಡಿದ್ದ ಚಾಕುವಿನಿಂದ ಸಯ್ಯದ್ ಫರ್ಮಾನ್ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಇರಿದು ಕೊಂದೆ ಬಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಿಡ್ಲಘಟ್ಟ ವೃತ್ತ ನೀರಿಕ್ಷಕ ಸುರೇಶ್ ಕುಮಾರ್, ಅರೋಪಿ ಮನ್ಸೂರ್ ನನ್ನ ಬಂಧಿಸಿದ್ದು, ಮತ್ತೊರ್ವ ಆರೋಪಿ ನವಾಜ್ ಗಾಗಿ ಹುಡುಕಾಟ ನಡೆಸಿದ್ದಾರೆ.