– ಆಸ್ಪತ್ರೆಯಲ್ಲೂ ನಿಲ್ಲದ ಜಗಳ
ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಮುಗಿದರೂ ಹಳ್ಳಿಗರ ಫೈಟ್ ನಿಂತಿಲ್ಲ ಚುನಾವಣೆಯಲ್ಲಿ ಸೋತ ಹಾಗೂ ಗೆದ್ದ ಗುಂಪುಗಳ ಮಧ್ಯೆ ಮಾರಾಮಾಡಿ ನಡೆದು, ಇಬ್ಬರೂ ಒಬ್ಬರಿಗೊಬ್ಬರು ಚೂರಿ ಇರಿದುಕೊಂಡು ಆಸ್ಪತ್ರೆ ಸೇರಿದ್ದಾರೆ.
Advertisement
ಚಿಕ್ಕಮಗಳೂರು ತಾಲೂಕಿನ ಸಗನಿಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಗನಿಪುರದ ಯತೀಶ್ ಗೆಲವು ಸಾಧಿಸಿದ್ದರು. ನಾಗೇಶ್ ಎಂಬುವರು ಸೋತಿದ್ದರು. ಹೊಸ ವರ್ಷದ ಆಚರಣೆ ಹಿನ್ನೆಲೆ ಕೇಕ್ ಕತ್ತರಿಸುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಎರಡೂ ಗುಂಪಿನ 10ಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಗಲಾಟೆ ನಡೆಯುವ ವೇಳೆ ಒಬ್ಬರಿಗೊಬ್ಬರು ಚಾಕು ಇರಿದುಕೊಂಡು ಎಲ್ಲರೂ ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಬೆಡ್‍ನಲ್ಲಿ ಮಲಗಿದ್ದಾರೆ. ಓರ್ವನ ಬೆನ್ನಿಗೆ ಚೂರಿ ಹಾಕಿದ್ದು, ಮತ್ತೋರ್ವನಿಗೆ ಪಕ್ಕೆಗೆ ಚಾಕು ತಿವಿದಿದ್ದಾರೆ. ಓರ್ವನ ಕೈ ಮುರಿದಿದ್ದರೆ, ಮತ್ತೋರ್ವನಿಗೆ ತಲೆ, ಕೈಗೆ ತೀವ್ರ ಗಾಯವಾಗಿದೆ. ಓರ್ವನ ತಲೆಗೆ ಸುಮಾರು 27 ಹೊಲಿಗೆ ಹಾಕಿದ್ದು, ಮತ್ತೊಬ್ಬರಿಗೆ 12 ಹೊಲಿಗೆ ಹಾಕಿದ್ದಾರೆ.
Advertisement
Advertisement
ಒಬ್ಬರ ಮೇಲೋಬ್ಬರು ಆರೋಪಿಸಿ, ಹೊಡೆದಾಡಿ ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯಲ್ಲೂ ಜಗಳ ನಿಂತಿಲ್ಲ. ಮನೆ ಮುಂದಿದ್ದ ಆಪೆ ಆಟೋವಿನ ಗಾಜು ಪುಡಿ ಮಾಡಿದ್ದಾರೆ. ಗಲಾಟೆಗೆ ಅಕ್ಕಪಕ್ಕದ ಊರಿನ ಜನರೂ ಬಂದಿದ್ದಾರೆಂದು ಒಬ್ಬರ ಮೇಲೋಬ್ಬರು ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದ ಯತೀಶ್ ಎಂಬುವರ ಗ್ಯಾಂಗ್ ನಮ್ಮ ಮೇಲೆ ಹಲ್ಲೆ ಮಾಡಿದೆ. ವೆಂಕಟೇಶ್, ಗುಂಡ, ಬೈರೇಶ್ ಎಂಬುವರು ಹೊಡೆದಿದ್ದಾರೆ. ಕತ್ತಲಾಗಿದ್ದರಿಂದ ಯಾರು ಇದ್ದರೆಂದು ಗೊತ್ತಾಗಿಲ್ಲ. ಹೆಂಗಸರ ಮೇಲೂ ಹಲ್ಲೆ ಮಾಡಿದ್ದಾರೆ. ನಮ್ಮ ಅತ್ತಿಗೆಗೆ ದೊಣ್ಣೆಯಿಂದ ಹೊಡೆದಿದ್ದಾರೆ. ತಮ್ಮ ತಾಯಿಗೆ ಕಾಲಿನಲ್ಲಿ ತುಳಿದಿದ್ದಾರೆ. ಇಂದು ಒಬ್ಬರಿಗೆ ಹೊಡೆದಿದ್ದಾರೆ. ನಾಳೆ ಮತ್ತೊಬ್ಬರಿಗೆ ಹೊಡೆಯುತ್ತಾರೆ. ಯಾರು ಕಾದು ಕೂತಿರುತ್ತಾರೆ ಎಂದು ಹಲ್ಲೆಗೊಳಗಾದ ಮಲ್ಲೇಶ್ ಎಂಬುವರು ಆರೋಪಿಸಿದ್ದಾರೆ.
ಗೆದ್ದ ಯತೀಶ್ ಕೂಡ, ಮಲ್ಲೇಶ, ನಾಗೇಶ್ ಬಸವರಾಜ್ ಎಂಬುವರು ಬೇರೆ ಊರಿಂದ ಬಂದಿದ್ದರು. ಏಕೆ ಬೇರೆ ಊರಿಂದ ಬಂದಿದ್ದೀರಾ ಏನ್ ಗಲಾಟೆ ಎಂದು ಕೇಳಿ ಗಲಾಟೆ ಜಾಗಕ್ಕೆ ಹೋಗುವಾಗ ನನ್ನ ಜೊತೆ ಪೊಲೀಸರೂ ಇದ್ದರೂ ಅವರಿದ್ದಾಗಲೇ ಮಲ್ಲೇಶ ಹಿಡಿದುಕೊಂಡು ನಾಗೇಶ ಚಾಕುವಿನಿಂದ ಚುಚ್ಚೇ ಬಿಟ್ಟ ಎಂದು ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಸೋಲು-ಗೆಲುವು ಇದ್ದದ್ದೆ. ಚಾಕುವಿನಲ್ಲಿ ಚುಚ್ಚುವಷ್ಟು ದ್ವೇಷ ಯಾಕೆ ಅನ್ನೋದು ಯಾರಿಗೂ ಗೊತ್ತಿಲ್ಲ. ಎರಡೂ ಗುಂಪಿನ ಮಧ್ಯೆ ಏನ್ ಗಲಾಟೆಯೋ ಅದೂ ಗೊತ್ತಿಲ್ಲ. ಇಬ್ಬರೂ ಮಾರಾಮಾರಿ ಹೊಡೆದಾಡಿ ಆಸ್ಪತ್ರೆ ಸೇರಿ ಈಗ ಒಬ್ಬರ ಮೇಲೊಬ್ಬರು ಆರೋಪಿಸುತ್ತಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.