ಕಲಬುರಗಿ: ತುಂಬಿ ಹರಿಯುತ್ತಿದ್ದ ಹಳ್ಳದ ಸೇತುವೆ ದಾಟುವಾಗ ಬೈಕ್ ಸವಾರರು ಕೊಚ್ಚಿ ಹೋದ ಆಘಾತಕಾರಿ ಘಟನೆ ನಡೆದಿದೆ.
ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಹಳ್ಳ ತುಂಬಿ ಹರಿಯುತ್ತಿದ್ದರೂ, ಇಷ್ಟೆಲ್ಲ ಪ್ರವಾಹದ ದುರ್ಘಟನೆ ನಡೆಯುತ್ತಿದ್ದರೂ, ಬೈಕ್ ಸವಾರ ಸಾಹಸ ಮಾಡಿ ಹಳ್ಳ ದಟಲು ಮುಂದಾಗಿದ್ದಾರೆ. ಸೇತುವೆ ದಾಟುವಾಗ ದುರ್ಘಟನೆ ಸಂಭವಿಸಿದ್ದು, ಇಬ್ಬರೂ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು, ಸಹಾಯಕ್ಕೆ ಮುಂದಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಓರ್ವ ಯುವಕ ಈಜಿ ದಡ ಸೇರಿದ್ದಾನೆ. ಆದರೆ ಮತ್ತೋರ್ವ(12) ವರ್ಷದ ಬಾಲಕ ನೀರಲ್ಲಿ ಕೊಚ್ಚಿ ಹೋಗಿದ್ದಾನೆ.
ಇಬ್ಬರೂ ಡಬರಾಬಾದ್ ಗ್ರಾಮದ ನಿವಾಸಿಗಳಾಗಿದ್ದು, ಬೋಸಗಾ ಕೆರೆ ವೀಕ್ಷಿಸಿ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬಾಲಕನ ಶೋಧ ಕಾರ್ಯ ಮುಂದುವರಿದಿದೆ.