– ಮುಗಿಲುಮುಟ್ಟಿತು ಪೋಷಕರ ಆಕ್ರಂದನ
ಚಿಕ್ಕೋಡಿ(ಬೆಳಗಾವಿ): ಭಾರೀ ಮಳೆಗೆ 12 ವರ್ಷದ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಇಂದು ಆಕೆಯ ಶವ ಪತ್ತೆಯಾಗಿದೆ.
ದುರ್ದೈವಿ ಬಾಲಕಿಯನ್ನು ಕಿರಣ ವಿಭೂತಿ ಎಂದು ಗುರುತಿಸಲಾಗಿದೆ. ಈ ದುರ್ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ರಾಮನಗರದಲ್ಲಿ ನಡೆದಿದೆ. ಧಾರಕಾವಾಗಿ ಸುರಿದಿದ್ದ ಮಳೆಗೆ ರಾಮನಗರದ ಹಳ್ಳ ತುಂಬಿ ಹರಿದಿದ್ದು, ಈ ನೀರಿನಲ್ಲಿ ಬಾಲಕಿ ಕೊಚ್ಚಿ ಹೋಗಿದ್ದಳು. ಇದೀಗ ಬಾಲಕಿಯ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತ ಮಹಾರಾಷ್ಟ್ರದಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ವ ಸುಪ್ರಸಿದ್ಧ ಹೊಳೆಮ್ಮ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಹೀರಣ್ಯಕೇಶಿ ನದಿ ನೀರು ದೇವಸ್ಥಾನವನ್ನು ಸಂಪೂರ್ಣವಾಗಿ ಸುತ್ತುವರಿದಿದೆ.
50ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಹುಕ್ಕೇರಿ ತಾಲೂಕಿನ ಗೌಡವಾಡ, ಅರ್ಜುನವಾಡ ಗ್ರಾಮಗಳಿಗೂ ಹೀರಣ್ಯಕೇಶಿ ನದಿ ನೀರು ನುಗ್ಗಿದೆ. ಕೃಷ್ಣಾ ನದಿಯ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಉಂಟಾಗಿದ್ದು, 2 ಲಕ್ಷ 40 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಯ ಒಳಹರಿವು ಇದ್ದರೆ ಸಂಜೆವರೆಗೂ 3 ಲಕ್ಷ ಕ್ಯೂಸೆಕ್‍ಗೂ ಅಧಿಕ ನೀರು ಕೃಷ್ಣಾ ನದಿಗೆ ಹರಿದು ಬರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರಗಳಲ್ಲಿ ಪ್ರವಾಹ ನಿರ್ಮಾಣವಾಗುವ ಸಾಧ್ಯತೆಗಳಿವೆ.
ಬೆಳಗಾವಿ ಜಿಲ್ಲಾಡಳಿತ ನದಿ ತೀರದ ಜನರ ಸ್ಥಳಾಂತರಕ್ಕೆ ಹರಸಾಸಹ ಪಡುತ್ತಿದೆ. ಹೀರಣ್ಯಕೇಶಿ ನದಿ ತೀರದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಜಾನುವಾರಗಳ ಶವಗಳು ತೇಲಿ ಬರುತ್ತಿವೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ವರುಣಾರ್ಭಟ, ಕರ್ನಾಟಕದಲ್ಲಿ ಜಲತಾಂಡವ – ವರುಣನ ರೌದ್ರಾವತಾರಕ್ಕೆ ರಾಜ್ಯದಲ್ಲಿ 6 ಮಂದಿ ಬಲಿ