ಹಳೆ ಬಾಯ್‍ಫ್ರೆಂಡ್ ನೆನೆದ ದೀಪಿಕಾ ಪಡುಕೋಣೆ

Public TV
3 Min Read
deepika padukone

ನವದೆಹಲಿ: ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ವಿವಾಹವಾಗಿ ಎರಡು ವರ್ಷಗಳೇ ಕಳೆಯಿತು. ಹೀಗಿದ್ದರೂ ಇದೀಗ ದೀಪಿಕಾ ತಮ್ಮ ಹಳೆಯ ಬಾಯ್‍ಫ್ರೆಂಡ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

deepika padukone 3

ವಿವಾಹವಾಗುವುದಕ್ಕೂ ಮುನ್ನ ದೀಪಿಕಾ ಪಡುಕೋಣೆ ಹೆಸರು ಉದ್ಯಮಿಗಳು, ಕ್ರಿಕೆಟಿಗರು ಹಾಗೂ ಸಿನಿಮಾ ತಾರೆಯರೊಂದಿಗೆ ತಳುಕು ಹಾಕಿಕೊಂಡಿತ್ತು. ಆದರೆ ಪ್ರೀತಿಸಿದ್ದು ನಟ ರಣಬೀರ್ ಕಪೂರ್ ಅವರನ್ನು. ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಬಾಲಿವುಡ್‍ನ ಕ್ಯೂಟ್ ಕಪಲ್ ಅಂತಾ ಗುರುತಿಸಿಕೊಂಡಿದ್ದರು. ಅದೇ ರೀತಿ ಇಬ್ಬರೂ ಓಡಾಡುತ್ತಿದ್ದರು ಸಹ. ಇದೇ ಸಂದರ್ಭದಲ್ಲಿ ದೀಪಿಕಾ ಕತ್ತಿನ ಮೇಲೆ ರಣ್ಬೀರ್ ಕಪೂರ್ ಹೆಸರಿನ ಟ್ಯಾಟು ಹಾಕಿಸಿಕೊಂಡಿದ್ದರು. ಆದರೆ ಇವರಿಬ್ಬರ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ. ವೈಮನಸ್ಸಿನಿಂದಾಗಿ ಬೇರೆಯಾದರು.

deepika padukone 2

ಈ ಎಲ್ಲ ಘಟನೆ ನಡೆದ ಬಳಿಕ ಕೆಲ ದಿನಗಳ ಕಾಲ ದೀಪಿಕಾ ತುಂಬಾ ಬೇಸರಗೊಂಡಿದ್ದರು. ಕೊನೆಗೆ ರಣ್ವೀರ್ ಸಿಂಗ್ ಅವರನ್ನು ವಿವಾಹವಾದರು. ಈ ಜೋಡಿ ವಿವಾಹವಾಗಿ ಎರಡು ವರ್ಷಗಳು ಕಳೆದಿದ್ದು, ಇದೀಗ ಇದ್ದಕ್ಕಿದ್ದಂತೆ ಹಳೆ ಬಾಯ್‍ಪ್ರೆಂಡ್ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೆಲವು ಭಾವನಾತ್ಮಕ ಸಾಲುಗಳನ್ನೂ ಬರೆದುಕೊಂಡಿದ್ದಾರೆ. ಆದರೆ ಇದು ಅವರ ಪ್ರೀತಿಯ ಬಗ್ಗೆ ಅಲ್ಲ. ಬದಲಿಗೆ ಅವರ ಸಿನಿಮಾದ ನೆನಪಿನ ಕುರಿತು.

ranveer singh and deepika padukone

ಹೌದು ದೀಪಿಕಾ, ರಣ್ಬೀರ್ ಕಪೂರ್ ಒಟ್ಟಿಗೆ ನಟಿಸಿದ್ದ ‘ಯೇ ಜವಾನಿ ಹೈ ದಿವಾನಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಏಳು ವರ್ಷ. ಈ ಸಿನಿಮಾ 2013ರಲ್ಲಿ ಬಿಡುಗಡೆಯಾಗಿತ್ತು. ಬಾಲಿವುಡ್‍ನಲ್ಲಿ ಸಖತ್ ಸದ್ದು ಮಾಡಿತ್ತು ಸಹ. ಈ ಸವಿ ನೆನಪಿನ ಚಿತ್ರಗಳನ್ನು ದೀಪಿಕಾ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಿಗೆ ಸಾಲುಗಳನ್ನು ಬರೆದಿರುವ ಅವರು, ‘ನೆನಪುಗಳು ಸಿಹಿ ತಿಂಡಿಯ ಡಬ್ಬಾ ಇದ್ದಂತೆ, ಒಮ್ಮೆ ತೆರೆದರೆ ಕೇವಲ ಒಂದು ತುಣುಕನ್ನು ತಿಂದು ಸುಮ್ಮನಿರಲಾಗದು’ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಕುರಿತ ವಿಡಿಯೋವನ್ನು ನಿರ್ಮಾಪಕ ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿಯೂ ಹಂಚಿಕೊಂಡಿದ್ದು, ಈ ಒಂದು ಚಿತ್ರ ಯುವ ಪೀಳಿಗೆಗೆ ಬದುಕೋದನ್ನ ಕಲಿಸ್ತು. ಕೀಪ್ ರನ್ನಿಂಗ್, ಇವನ್ ಕೀಪ್ ಫಾಲಿಂಗ್ ಬಟ್ ನೆವರ್ ಸ್ಟಾಪಿಂಗ್’ ಎಂಬ ಸಾಲುಗಳನ್ನು ಬರೆಯಲಾಗಿದೆ. ಅಲ್ಲದೆ ಸೆಲೆಬ್ರೇಟಿಂಗ್, ಹ್ಯಾಷ್‍ಟ್ಯಾಗ್‍ನೊಂದಿಗೆ 7ಇಯರ್ಸ್‍ಆಫ್‍ವೈಜೆಎಚ್‍ಡಿ ಎಂದು ಬರೆಯಲಾಗಿದೆ.

ಈ ಚಿತ್ರ 2013ರಲ್ಲಿ ಬಾಲಿವುಡ್‍ನಲ್ಲಿ ಭಾರಿ ಸದ್ದು ಮಾಡಿತ್ತು. ಹೀಗಾಗಿ ದೀಪಿಕಾ ಪಡುಕೋಣೆ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸಿನಿಮಾ ತಂಡವನ್ನು ನೆನೆದಿದ್ದಾರೆ. ಆದರೆ ದೀಪಿಕಾ ಅವರ ಇನ್‍ಸ್ಟಾ ಸಾಲುಗಳು ತಮ್ಮ ಹಳೆಯ ಪ್ರೀತಿಯನ್ನು ನೆನಪಿಸಿದೆಯೇ ಎಂಬ ಕುರಿತು ಸಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *