ಮೈಸೂರು: ಜಿಲ್ಲೆ ಹೊರತು ಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲೂ ಲಾಕ್‍ಡೌನ್ ತೆರವಾಗಿರುವುದರಿಂದ ತರಕಾರಿಗಳಿಗೆ ಬೇಡಿಕೆ ಸೃಷ್ಟಿಯಾಗಿದ್ದು, ಬೆಲೆಗಳು ದುಬಾರಿಯತ್ತ ಸಾಗಿವೆ.
ಅನ್‍ಲಾಕ್ ಹಿನ್ನೆಲೆ ಹೋಟೆಲ್‍ಗಳಲ್ಲಿ ಜನರು ಕುಳಿತು ಆಹಾರ ಸೇವಿಸುವುದಕ್ಕೆ ಅನುಮತಿ ಸಿಕ್ಕಿದ್ದು, ಇನ್ನಷ್ಟು ಬೇಡಿಕೆ ಹೆಚ್ಚಳವಾಗಿದೆ. ಅಲ್ಲದೆ ಜನ ಸಹ ಅನ್‍ಲಾಕ್ ಬಳಿಕ ಮುಗಿಬಿದ್ದು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.
ಟೊಮೆಟೊ ಕೆ.ಜಿಗೆ 16ರಿಂದ 20 ರೂ. ರವರೆಗೆ ಮಾರಾಟ ದರ ನಿಗದಿಯಾಗಿದೆ. ಬೀನ್ಸ್ ಕೆ.ಜಿಗೆ 55 ರೂ., ಕ್ಯಾರೆಟ್ ಕೆ.ಜಿ.ಗೆ 48 ರೂ., ದಪ್ಪಮೆಣಸಿನಕಾಯಿ ಕೆ.ಜಿ.ಗೆ 32 ರೂ., ಎಲೆಕೋಸು ಕೆ.ಜಿ.ಗೆ 8 ರೂ, ಬದನೆ ಕೆ.ಜಿ.ಗೆ 15 ರೂ., ಹೂಕೋಸು ಕೆ.ಜಿ.ಗೆ 18 ರೂ., ನುಗ್ಗೆಕಾಯಿ ಕೆ.ಜಿ.ಗೆ 70 ರೂ., ಹಸಿಮೆಣಸಿನಕಾಯಿ ಕೆ.ಜಿ.ಗೆ 20 ರೂ. ಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.