ಲಂಡನ್: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೂರವಾಗಿದ್ದ ದಂಪತಿ ಹಲವು ದಿನಗಳ ಬಳಿಕ ಮತ್ತೆ ಒಂದಾಗುವ ಒಂದು ಸುಂದರವಾದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ವಯಸ್ಸಾದ ದಂಪತಿಯ ಪ್ರೀತಿಗೆ ಮರುಳಾಗಿದ್ದಾರೆ. ಅಲ್ಲದೇ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸುಮಾರು 4 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.
ಮೇರಿ ಡೇವಿಸ್(89) ತನ್ನ ಪತಿ ಗೋರ್ಡನ್‍ರನ್ನು ಎಂಟು ತಿಂಗಳ ಹಿಂದೆ ಕೇರ್ ಹೋಂಗೆ ತೆರಳುವಾಗ ನೋಡಿದ್ದರು. ಲಾಕ್‍ಡೌನ್ ನಿರ್ಬಂಧಗಳಿಂದಾಗಿ ಗೋರ್ಡಾನ್‍ಗೆ ಮೇರಿಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಫೆಬ್ರವರಿಯಲ್ಲಿ ಮೇರಿ ಡೇವಿಸ್ ಇಂಗ್ಲೆಂಡ್‍ನ ನಾಟಿಂಗ್ಹ್ಯಾಮ್ ಶೈರ್‍ನಲ್ಲಿರುವ ಮತ್ತೊಂದು ಕೇರ್ ಹೋಂಗೆ ತೆರಳಿದ ವೇಳೆ ಪತಿಯನ್ನು ನೋಡಿದ್ದಾರೆ.
Advertisement
Advertisement
ಪತ್ನಿ ಬರುತ್ತಿರುವುದನ್ನು ಮೊದಲೇ ತಿಳಿದಿದ್ದ ಗೋರ್ಡಾನ್ ಮೇರಿ ಹೋಂ ಕೇರ್ ಬಂದ ತಕ್ಷಣ ಸರ್‍ಪ್ರೈಸ್ ನೀಡಿದ್ದಾರೆ. ಸದ್ಯ ಈ ದಂಪತಿ ಇದೀಗ ಮತ್ತೆ ಒಟ್ಟಿಗೆ ವಾಸಿಸುತ್ತಿದ್ದಾರೆ.
Advertisement
ಈ ವೀಡಿಯೋವನ್ನು ಅಲ್ಲೆ ಇದ್ದ ಸಿಬ್ಬಂದಿ ಸೆರೆಹಿಡಿದಿದ್ದು, ಪತ್ನಿಯನ್ನು ನೋಡಿದ ಕೂಡಲೇ ಗೋರ್ಡಾನ್ ಕೈನಲ್ಲಿ ಹಿಡಿದುಕೊಂಡಿದ್ದ ಕೋಲನ್ನು ಬಿಟ್ಟು ಮೇರಿಯನ್ನು ತಬ್ಬಿಕೊಳ್ಳುತ್ತಾರೆ. ಈ ವೇಳೆ ಬಹಳ ದಿನಗಳ ನಂತರ ಪತಿ ಗೋರ್ಡಾನ್‍ನನ್ನು ನೋಡಿದ ಮೇರಿ ಕೂಡ ಆನಂದಭಾಷ್ಪ ಸುರಿಸುತ್ತಾರೆ. ಜೊತೆಗೆ ಇಬ್ಬರು ಐ ಲವ್ ಯೂ ಎಂದು ಪ್ರೀತಿಯನ್ನು ವ್ಯಕ್ತಪಡಿಸುತ್ತಾ ಚುಂಬಿಸುವುದನ್ನು ಕಾಣಬಹುದಾಗಿದೆ.
Advertisement
Manchester, England:
After not seeing his wife Mary for several months due to the pandemic — Gordon decided to surprise her by moving into the assisted living home so they could be together.
Here’s the reunion…pic.twitter.com/Kx40D57WzJ
— Rex Chapman???????? (@RexChapman) April 14, 2021