ಲಂಡನ್: ಭಾರತ ಮಹಿಳಾ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್‍ಗೆ ದಿಗ್ಗಜ ಕ್ರಿಕೆಟಿಗರು ಸಹಿತ ಅಭಿಮಾನಿಗಳು ಫಿದಾ ಆಗಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಮೊದಲ ಟ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5ನೇ ಓವರ್ ನಲ್ಲಿ ಎಮಿ ಜೋನ್ಸ್ ಬಾರಿಸಿದ ಬಿಗ್ ಶಾಟ್ ಒಂದನ್ನು ಲಾಂಗ್ ಆಫ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್ ಕ್ಷಣ ಮಾತ್ರದಲ್ಲಿ ಜಿಂಕೆಯಂತೆ ನೆಗೆದು ಸ್ಟನ್ನಿಂಗ್ ಕ್ಯಾಚ್ ಹಿಡಿದು ವೀಕ್ಷರನ್ನು ನಿಬ್ಬೆರಗಾಗುವಂತೆ ಮಾಡಿದರು.
ಜೋನ್ಸ್ ಹೊಡೆದ ಬಿಗಿಯಾದ ಹೊಡೆತ ಇನ್ನೆನೂ ಸಿಕ್ಸರ್ ಹೊಗಬೇಕೆನ್ನುವಷ್ಟರಲ್ಲಿ ಚಂಗನೆ ಜಿಗಿದ ಹರ್ಲೀನ್ ಬಾಲ್ ಹಿಡಿದರು. ಈ ವೇಳೆ ಸಮತೋಲನ ಕಳೆದುಕೊಂಡು ಚೆಂಡನ್ನು ಮತ್ತೆ ಮೇಲಕ್ಕೆಸೆದರು. ಬಳಿಕ ಬೌಂಡರಿ ಗೆರೆ ದಾಟಿ ಮತ್ತೆ ಮೈದಾನದೊಳಗೆ ಹಾರಿ ಕ್ಯಾಚ್ ಹಿಡಿಯುವ ಮೂಲಕ ಸ್ವತಃ ಭಾರತ ತಂಡದ ನಾಯಕಿ ಸೃತಿ ಮಂಧಾನ ಅವರನ್ನೂ ಕೂಡ ದಂಗುಬಡಿಸಿದರು. ಇದನ್ನೂ ಓದಿ: ಸ್ಮೃತಿ ಮಂಧಾನ ರೋಚಕ ಕ್ಯಾಚ್ – Fly Smriti Fly ಅಭಿಮಾನಿಗಳ ಹರ್ಷೋದ್ಘಾರ
As good a catch one will ever see on a cricket field, from Harleen Deol. Absolutely top class. https://t.co/CKmB3uZ7OH
— VVS Laxman (@VVSLaxman281) July 10, 2021
ಹರ್ಲೀನ್ ಕ್ಯಾಚ್ ಕಂಡ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಸಹಿತ ಹಲವು ಆಟಗಾರರು ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರ್ಲೀನ್ ಕ್ಯಾಚ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 18 ರನ್ ಗಳ ಸೋಲು ಅನುಭವಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡ 1-0 ಪಂದ್ಯಗಳ ಮುನ್ನಡೆಗಳಿಸಿಕೊಂಡಿದೆ.