ಹೈದರಾಬಾದ್: ಯುಗಾದಿ ಹಬ್ಬದ ಪ್ರಯುಕ್ತ ಟಾಲಿವುಡ್ ನಟ ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ್ ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ರಾಧೆ ಶ್ಯಾಮ್ ಸಿನಿಮಾದ ಈ ನೂತನ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಫೋಟೋದಲ್ಲಿ ಪ್ರಭಾಸ್ ಲವ್ವರ್ ಬಾಯ್‍ನಂತೆ ರೆಟ್ರೋ ಲುಕ್‍ನಲ್ಲಿ ಮಿಂಚಿದ್ದು, ಕಂದು ಬಣ್ಣದ ಸ್ವೆಟರ್, ಅದಕ್ಕೆ ಸೂಟ್ ಆಗುವಂತಹ ಪ್ಯಾಂಟ್ ಧರಿಸಿ, ಕಂಬವನ್ನು ಹಿಡಿದುಕೊಂಡು ನಿಂತಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಪೋಸ್ಟರ್‍ನಲ್ಲಿ ಮಿಲಿಯನ್-ಡಾಲರ್‍ಗಳಿಗೆ ಸಾಟಿ ಎಂಬಂತೆ ಪ್ರಭಾಸ್ ಸ್ಮೈಲ್ ನೀಡಿದ್ದಾರೆ.
View this post on Instagram
ಸದ್ಯ ಈ ಪೋಸ್ಟರ್‍ನನ್ನು ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಸುಂದರ ಹಬ್ಬದ ಆಚರಣೆಯ ಪ್ರಮುಖ ಅಂಶವೆಂದರೆ ಪ್ರೀತಿ. ಅದನ್ನು ಅನುಭವಿಸಿ, ಅದನ್ನು ಪಾಲಿಸಿ, ಅದನ್ನು ಹಂಚಿ. ನಿಮಗೂ ಹಾಗೂ ನಿಮ್ಮ ಪ್ರೀತಿ ಪಾತ್ರರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.
View this post on Instagram
ಈ ಸಿನಿಮಾದಲ್ಲಿ ಪ್ರಭಾಸ್ ಜೊತೆ ನಟಿ ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಡ್ಯೂಯೆಟ್ ಆಡುತ್ತಿದ್ದು, ರಾಧಾಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮುರಳಿ ಶರ್ಮ, ಸಚಿನ್ ಖೇಡೇಕರ್, ಪ್ರಿಯದರ್ಶಿ, ಸಶಾ ಚೆಟ್ರಿ, ಕುನಾಲ್ ರಾಯ್, ಕಪೂರ್ ಮತ್ತು ಸತ್ಯನ್ ನಟಿಸಿದ್ದಾರೆ. ರಾಧೆ ಶ್ಯಾಮ್ ಮುಂಬರುವ ಜುಲೈ 30 ರಂದು ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.