ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಈಗ ಸಿಡಿ ಪ್ರಕರಣ ಸದ್ದು ಮಾಡುತ್ತಿದೆ. ಮಾಜಿ ಸಚಿವರ ಸಿಡಿ ಸ್ಫೋಟದ ಬೆನ್ನಲ್ಲೇ ಮಾಜಿ ಶಾಸಕರ ಪುತ್ರನಿಗೆ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್‍ಮೇಲ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಧಾರವಾಡ ಜಿಲ್ಲೆಯ ಮಾಜಿ ಶಾಸಕನ ಪುತ್ರನ ವಿಡಿಯೋ ಇಟ್ಟುಕೊಂಡಿರುವ ಯುವತಿ ಬ್ಲ್ಯಾಕ್‍ಮೇಲ್ ಮಾಡಿದ್ದಾಳೆ ಎಂದು ಮಾಜಿ ಶಾಸಕರ ಪುತ್ರ ಸೈಬರ್ ಕ್ರೈಂ ಠಾಣೆಗೆ ದೂರು ದಾಖಲಿಸಿದ್ದಾರೆ.
Advertisement
Advertisement
ಧಾರವಾಡ ಜಿಲ್ಲೆಯ ಮಾಜಿ ಶಾಸಕ ಪುತ್ರನಿಗೆ ಫೇಸ್‍ಬುಕ್ ನಲ್ಲಿ ಪರಿಚಯವಾದ ಯುವತಿ ವೀಡಿಯೋ ಕಾಲ್ ಮಾಡುತ್ತ ಸಲುಗೆಯಿಂದ ಇದ್ದ ಯುವತಿ ಮಾಜಿ ಶಾಸಕನ ಪುತ್ರನನ್ನು ಬಲೆಗೆ ಹಾಕಿಕೊಂಡಿದ್ದಾಳೆ. ವಿಡಿಯೋ ಕಾಲ್ ಮಾಡಿದ ಬಳಿಕ ಮಾಜಿ ಶಾಸಕರ ಮಗನ ಫೋಟೋ ಎಡಿಟ್ ಮಾಡಿ ಈ ವಿಡಿಯೋದಿಂದ ಬ್ಲ್ಯಾಕ್‍ಮೇಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ.
Advertisement
Advertisement
ಹಣ ಕೊಡದಿದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುವದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಹೆದರಿದ ಮಾಜಿ ಶಾಸಕನ ಫೋನ್ ಪೇ ಮೂಲಕ 13,200 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಾಗ ಮಾಜಿ ಶಾಸಕನ ಪುತ್ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ಎಂದು ನಮೂದು ಮಾಡಿ ದೂರು ದಾಖಲಾಗಿದೆ.
ಅವಳಿ ನಗರದಲ್ಲಿ ಆನ್‍ಲೈನ್ ವಂಚಕರ ಜಾಲ ಹೆಚ್ಚಾಗಿದೆ. ಏಳೆಂಟು ಜನರಿಗೆ ಇದೇ ರೀತಿ ಮೋಸ ಮಾಡಿ ತಂಡ ಸಾಕಷ್ಟು ಜನರಿಂದ ಹಣ ಎಗರಿಸಿದ್ದಾರೆ. ಸೈಬರ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.