ಹದಗೆಟ್ಟ ರಾಜ್ಯ ಹೆದ್ದಾರಿ ರಸ್ತೆ- ಸಸಿ ನೆಟ್ಟು ಆಕ್ರೋಶ

Public TV
1 Min Read
Gadag ROAD2

ಗದಗ: ಹದಗೆಟ್ಟ ರಾಜ್ಯ ಹೆದ್ದಾರಿ ಮಧ್ಯೆ ಸಸಿಗಳನ್ನು ನೆಡುವ ಮೂಲಕವಾಗಿ ಪ್ರತಿಭಟನೆ ಮಾಡಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರು ಬಳಿ ನಡೆದಿದೆ.

Gadag ROAD

ಲಕ್ಷ್ಮೇಶ್ವರ ಘಟಕದ ಕರವೆ ಕಾರ್ಯಕರ್ತರು ರಸ್ತೆ ದುರಸ್ತಿಗಾಗಿ ವಿಭಿನ್ನವಾದ ಪ್ರತಿಭಟನೆ ಮಾಡಿದರು. ಇದು ಲಕ್ಷ್ಮೇಶ್ವರ, ಬೆಳ್ಳಟ್ಟಿ ಮಾರ್ಗವಾಗಿ ಶಿಗ್ಗಾಂವಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಸಾಕಷ್ಟು ತಗ್ಗು ಗುಂಡಿಗಳಿಂದ ಕೂಡಿರುವುದರಿಂದ ಯಮಸ್ವರೂಪಿ ರಸ್ತೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಸಾಕಷ್ಟು ಅಪಘಾತಗಳಾಗಿದ್ದು, ಸಾವು ನೋವುಗಳು ನಿತ್ಯ ಸಂಭವಿಸುತ್ತಿವೆ. ರಾಜ್ಯ ಹೆದ್ದಾರಿ ಹಾಳಾದರೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಸ್ಥಳಿಯರದ್ದಾಗಿದೆ.ಇದನ್ನೂ ಓದಿ:  ಹಳೆಯ ಎಸಿ ಬಸ್‍ಗಳಲ್ಲಿ ಹಣ್ಣು, ತರಕಾರಿ ಸಾಗಾಟಕ್ಕೆ ಕೆಎಸ್‌ಆರ್‌ಟಿಸಿಯಿಂದ ಚಿಂತನೆ

Gadag ROAD4

ಸಾರ್ವಜನಿಕರು ಹಾಗೂ ಸಂಘಟಿಕರು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರು. ನಡುರಸ್ತೆನಲ್ಲಿ ಸಸಿಗಳನ್ನು ನೆಟ್ಟು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ರಸ್ತೆ ಬಂದ್ ಮಾಡಿದರು. ಶೀಘ್ರದಲ್ಲೇ ರಸ್ತೆ ದುರಸ್ತಿಗೊಳ್ಳದೇ ಹೊದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಸಂಘಟಕರು ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *