– ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಯಾದಗಿರಿ: ಟೈಲ್ಸ್ ಖರೀದಿಸಿದ ಹಣವನ್ನು ಕೊಡುವಂತೆ ಕೇಳಿದ್ದಕ್ಕೆ ಗ್ಯಾಂಗ್ ಕಟ್ಟಿಕೊಂಡು ಬಂದು ಟೈಲ್ಸ್ ಅಂಗಡಿ ಮಾಲೀಕನಿಗೆ ಮತ್ತು ಕೆಲಸಗಾರರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ.
ಆರು ತಿಂಗಳ ಹಿಂದೆ ನಗರದ ಬಾರ ಲಕ್ಕಿ ಬಾರ್ ಮಾಲೀಕ ರಾಘವೇಂದ್ರ, ರವಿ ಟೈಲ್ಸ್ ಅಂಗಡಿಯಿಂದ 3 ಸಾವಿರ ರೂಪಾಯಿ ಟೈಲ್ಸ್ ಖರೀದಿ ಮಾಡಿ, ಹಣ ಕೆಲವು ದಿನಗಳಲ್ಲಿ ಬಿಟ್ಟು ಕೊಡುವುದಾಗಿದೆ ಹೇಳಿದ್ದನು. ಆದರೆ ಟೈಲ್ಸ್ ಖರೀದಿಸಿ ಆರೇಳು ತಿಂಗಳಾದರೂ ರಾಘವೇಂದ್ರ ಹಣ ನೀಡಿರಲಿಲ್ಲ. ಇದರಿಂದಾಗಿ ಟೈಲ್ಸ್ ಅಂಗಡಿ ಮಾಲೀಕ ರವಿ ತಮ್ಮ ಅಂಗಡಿ ಕೆಲಸಗಾರ ಸುಭಾಷ್ ಎಂಬವರನ್ನು ಹಣ ವಸೂಲಿಗೆ ರಾಘವೇಂದ್ರ ಬಳಿ ಕಳುಹಿಸಿದ್ದರು. ಈ ವೇಳೆ ರಾಘವೇಂದ್ರ ಹಣಕೊಡಲು ನಿರಾಕರಿಸಿದ್ದಾನೆ. ಹೀಗಾಗಿ ಸುಭಾಷ್ ರಾಘವೇಂದ್ರನ ಮೊಬೈಲ್ ಕುಸಿದಕೊಂಡು ಬಂದಿದ್ದರು.
ಇದರಿಂದಾಗಿ ಆಕ್ರೋಶಗೊಂಡ ರಾಘವೇಂದ್ರ 30 ಜನರ ಜೊತೆಗೆ ಟೈಲ್ಸ್ ಅಂಗಡಿಗೆ ಬಂದು ಮಾಲೀಕ ರವಿ ಸೇರಿದಂತೆ ಕೆಲಸಗಾರರ ಮೇಲೆ ಹಲ್ಲೆ ನಡೆಸಿದ್ದಾನೆ. ರಾಘವೇಂದ್ರ ಮತ್ತು ಆತನ ಸಹಚರರು ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.
ಈ ಘಟನೆ ನಡೆದು ಮೂರು ದಿನವಾದರೂ ಯಾದಗಿರಿ ನಗರ ಠಾಣೆಯ ಪೊಲೀಸರು ಕೇಸ್ ದಾಖಲಿಸಿದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಯಾದಗಿರಿ ನಗರ ಠಾಣೆಯ ಸಿಬ್ಬಂದಿ ನಡೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂದು ಟೈಲ್ಸ್ ಅಂಗಡಿ ಮಾಲೀಕ ರವಿ ಆರೋಪಿಸಿದ್ದಾರೆ. ಕಳೆದ ಫೆ.25 ರಂದು ಈ ಘಟನೆ ನಡೆದಿದ್ದು, ಮೂರು ದಿನ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.