ನೆಲಮಂಗಲ: ಕೊರೊನಾ ಸಾವಿನಲ್ಲೂ ಹಣದ ಲೂಟಿ ನಡೆಯುತ್ತಿದೆ. ಅಂಬುಲೆನ್ಸ್ ಸಿಬ್ಬಂದಿಗೆ ಹಣ ಕೊಟ್ಟರೆ ಮಾತ್ರ ಶವ ಸಾಗಿಸುತ್ತಾರೆ. ಈ ದಂಧೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಹೌದು. ಇಲ್ಲಿ ಅಂಬುಲೆನ್ಸ್ ಸಿಬ್ಬಂದಿಗೆ ಹಣ ಕೊಡದಿದ್ದರೆ ಅವರು ಶವಸಂಸ್ಕಾರಕ್ಕೆ ಬರಲ್ಲ. ಶವಸಂಸ್ಕಾರಕ್ಕೆ ಒಟ್ಟು ನಾಲ್ಕು ಮಂದಿ ಸಿಬ್ಬಂದಿ ಬರುತ್ತಾರೆ. ಆ ನಾಲ್ಕು ಮಂದಿ ಸಿಬ್ಬಂದಿ ತಲಾ ಎರಡೂವರೆ ಸಾವಿರಕ್ಕೆ ಬೇಡಿಕೆ ಇಡುತ್ತಾರೆ. ಜೊತೆಗೆ ಪಿಪಿಇ, ಸ್ಯಾನಿಟ್ಯೆಸರ್, ಹಗ್ಗ, ಬ್ಲಿಚಿಂಗ್ ಪೌಡರ್ ಗೆ ಪ್ರತ್ಯೇಕವಾಗಿ ಹಣ ನೀಡಬೇಕು. ಇವೆಲ್ಲವನ್ನ ಸರ್ಕಾರ ಉಚಿತವಾಗಿ ನೀಡುತ್ತಿದ್ರು ಹಣ ಕೊಡಲೇಬೇಕಾಗಿದೆ.
ನೆಲಮಂಗಲ ತಾಲೂಕಿನ ಶಿವಗಂಗೆ ಬಳಿಯ ಗಂಗೇನಪುರ ಗ್ರಾಮದ ಮಹಿಳೆ ಕೊರೊನಾಗೆ ಬಲಿಯಾಗಿದ್ದರು. ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಿಂದ ಗ್ರಾಮಕ್ಕೆ ಶವ ತರಲು ಅಂಬುಲೆನ್ಸ್ ಸಿಬ್ಬಂದಿ 5 ಸಾವಿರ ಹಣ ಪೀಕಿದ್ದಾರೆ.