ಹಡಗಿನಲ್ಲಿ ‘ಯಥರ್ವ್’ ಸಂಭ್ರಮ- ಗೋವಾ ಬೀಚ್‍ನಲ್ಲಿ ಜೂ.ರಾಖಿ ಭಾಯ್ ಕಲರವ

Public TV
2 Min Read
yash yatharv main

ಬೆಂಗಳೂರು: ಮನೆಯಲ್ಲಿ ಸಿಂಪಲ್ಲಾಗಿ ಯಥರ್ವ್ ಹುಟ್ಟುಹಬ್ಬ ಆಚರಿಸಿದರೂ ಬಳಿಕ ತುಂಬಾ ವಿಷೇಶವಾಗಿ ಹಾಗೂ ವಿಭಿನ್ನವಾಗಿ ತಮ್ಮದೇ ಶೈಲಿಯಲ್ಲಿ ಯಶ್ ಕುಟುಂಬ ಆಚರಿಸಿದ್ದು, ಗೋವಾ ಬೀಚ್‍ನಲ್ಲಿ ಹಡಗಿನಲ್ಲಿ ಅದ್ಧೂರಿಯಾಗಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

vlcsnap 2020 11 07 08h33m47s200 e1604718929193

ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತುಂಬಾ ರಿಚ್ ಆಗಿ ಆಚರಿಸಿರುವುದನ್ನು ನೋಡಬಹುದಾಗಿದೆ. ಈ ಸಂಭ್ರಮಾಚರಣೆಯಲ್ಲಿ ಕೇವಲ ನಾಲ್ಕೈದು ಮಂದಿ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದು, ಗೋವಾದ ಬೀಚ್‍ನಲ್ಲಿ ಬೃಹತ್ ಹಡಗಿನಲ್ಲಿ ಆನಂದಿಸಿ, ಕೇಕ್ ಕಟ್ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ತಮ್ಮ ಇಬ್ಬರು ಮಕ್ಕಳನ್ನು ಎತ್ತಿಕೊಂಡು ಸಂಭ್ರಮಿಸಿದ್ದಾರೆ.

vlcsnap 2020 11 07 08h36m09s88 e1604719097954

ರಾಧಿಕಾ ಪಂಡಿತ್ ಡಿಯೋ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದು, ನೀನು ಈ ಕೇಕ್‍ನ ಫ್ಲೇವರ್‍ನ್ನು ನೆನಪಿಟ್ಟುಕೊಳ್ಳುವುದಿಲ್ಲ, ಈ ದಿನ ಏಕೆ ವಿಶೇಷ ಎಂದು ಸಹ ನಿನಗೆ ತಿಳಿಯುವುದಿಲ್ಲ. ಆದರೆ ಹೆತ್ತವರಾದ ನಮಗೆ ಜೀವನದಲ್ಲಿ ಆಚರಿಸಬೇಕಾದ ಸಂಭ್ರಮವಾಗಿದೆ. ಇಂತಹ ಅದ್ಭುತ ಸಂತೋಷ ಉಂಟಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಹ್ಯಾಪಿ ಬರ್ತ್ ಡೇ ಎಂದು ಬರೆದು ಹಾರ್ಟ್ ಸಿಂಬಲ್ ಮೂಲಕ ತಮ್ಮ ಮಗನಿಗೆ ರಾಧಿಕಾ ಮತ್ತೊಮ್ಮೆ ಶುಭಾಶಯ ತಿಳಿಸಿದ್ದಾರೆ.

ಹಡಗಿನಲ್ಲಿ ಸಮುದ್ರದ ಮಧ್ಯೆ ತೆರಳಿ ಜಾಲಿ ರೈಡ್ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಇದರಲ್ಲಿ ಕುಟುಂಬಸ್ಥರು ಹಾಗೂ ಕೆಲ ಸ್ನೇಹಿತರು ಮಾತ್ರ ಭಾಗವಹಿಸಿದ್ದು, ಡ್ರೋನ್ ಬಳಸಿ ರಿಚ್ ಆಗಿ ವಿಡಿಯೋ ಮಾಡಿಸಲಾಗಿದೆ. ಈ ವಿಡಿಯೋದ ತುಣುಕನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದಾರೆ.

ಸಮುದ್ರ, ಬೀಚ್ ಎಂದರೆ ರಾಧಿಕಾ ಪಂಡಿತ್ ಅವರಿಗೆ ತುಂಬಾ ಇಷ್ಟ ಎಂದು ಈ ಹಿಂದೆ ರಾಖಿ ಭಾಯ್ ತಿಳಿಸಿದ್ದಾರೆ. ಹೀಗಾಗಿ ರಾಧಿಕಾ ಇಷ್ಟದಂತೆಯೇ ಗೋವಾದಲ್ಲೇ ಹುಟ್ಟುಹಬ್ಬ ಆಚರಿಸಿದ್ದಾರೆ. ಅಲ್ಲದೆ ಯಾಶ್ ಹಾಗೂ ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ ಸಹ ಗೋವಾದಲ್ಲೇ ನಡೆದಿತ್ತು. ಮ್ಯೂಸಿಕ್ ಬೀಟ್ ಜೊತೆಗೆ ಹಡಗಿನಲ್ಲಿ ಕಾಲ ಕಳೆದ ರಿಚ್ ವಿಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *