ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆ ಗೈಡ್‍ಗಳಾಗಿ ಮಾಹಿತಿ ನೀಡುತ್ತಿದ್ದ ಸುಮಾರು 70 ಕ್ಕೂ ಅಧಿಕ ಗೈಡ್‍ಗಳಿಗೆ ತಲಾ 10 ಸಾವಿರ ರೂ ಧನ ಸಹಾಯ ಮಾಡುವ ಮೂಲಕ ಇನ್ಪೋಸಿಸ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ನೆರವಿನ ಹಸ್ತಚಾಚಿದ್ದಾರೆ.
Advertisement
ಕೊರೊನಾ ಸಂಕಷ್ಟದಿಂದಾಗಿ ಹಂಪಿಯಲ್ಲಿದ್ದ ಗೈಡ್‍ಗಳು ಊಟಕ್ಕೂ ಪರದಾಡುವಂತಹ ಸ್ಥಿತಿಯಲ್ಲಿದ್ದರು ಇದನ್ನು ಮನಗಂಡ ಸುಧಾಮೂರ್ತಿ, ಪ್ರತಿಯೊಬ್ಬ ಗೈಡ್‍ಗಳಿಗೂ ಅಕೌಂಟ್ ಮೂಲಕ ಹಣ ಜಮೆ ಮಾಡಿದ್ದಾರೆ. ಸುಮಾರು 70 ಕ್ಕೂ ಅಧಿಕ ಗೈಡ್‍ಗಳಿಗೆ ತಲಾ 10 ಸಾವಿರ ರೂ ಧನ ಸಹಾಯ ಮಾಡುವ ಕೊರೊನ ಸಂಕಷ್ಟಕ್ಕೆ ನೆರವಾಗಿದ್ದಾರೆ.
Advertisement
ಕೊರೊನಾ ಸಂಕಷ್ಟದಿಂದ ಪ್ರವಾಸಿಗರಿಲ್ಲದೆ ಹಂಪಿ ಪ್ರವಾಸಿ ತಾಣ ಬಡವಾಗಿತ್ತು. ಈ ಮೊದಲು ಹಂಪಿಗೆ ಬರುತ್ತಿದ್ದ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡಿ ಗೈಡ್‍ಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಲಾಕ್‍ಡೌನ್ ಬಳಿಕ ಪ್ರವಾಸಿಗರಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಅರಿತ ಸುಧಾಮೂರ್ತಿ ಅವರು ಗೈಡ್‍ಗಳಿಗೆ ಸಹಾಯ ಮಾಡಿದ್ದಾರೆ.
Advertisement
Advertisement
ಮೊದಲ ಲಾಕ್‍ಡೌನಲ್ಲೂ ಹಂಪಿಯ ಗೈಡ್‍ಗಳ ಸಹಾಯಕ್ಕೆ ಬಂದಿದ್ದ ಸುಧಾಮೂರ್ತಿ ಇದೀಗ ಎರಡನೇ ಲಾಕ್ ಡೌನಲ್ಲೂ ಸಹಾಯ ಹಸ್ತಚಾಚಿದ್ದಾರೆ. ಇದರಿಂದ ಸಂತಸಗೊಂಡ ಗೈಡ್‍ಗಳು ಸುಧಾಮೂರ್ತಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸುಧಾಮೂರ್ತಿ ಅವರ ತರ ರಾಜ್ಯ ಸರ್ಕಾರವು ನಮ್ಮ ನೆರವಿಗೆ ದಾವಿಸಲಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.