ವಿಜಯಪುರ: ಮಠಾಧೀಶರು ಅವರ ಶೀಷ್ಯಂದಿರ ಬಗ್ಗೆ ಪ್ರೀತಿಯಿಂದ ಅಭಿಪ್ರಾಯ ಹೇಳೋದು ತಪ್ಪಲ್ಲ. ಆದರೆ ಬಿಜೆಪಿಗೆ ಬೆದರಿಕೆ ಹಾಕುವುದು ತಪ್ಪು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಾ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡ್ಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಇಳಿಸಿದರೆ ಬಿಜೆಪಿ ಸರ್ವನಾಶ ಆಗುತ್ತೆ ಎಂದು ಹೇಳಿದರು. ಕೆಲ ಮಠಾಧಿಪತಿಗಳು ಇದನ್ನು ಒಪ್ಪಿಲ್ಲ. ಆ ಸಭೆ ಮುಗಿಯುತ್ತಿದ್ದಂತೆ ಶ್ರೀ ದಿಂಗಾಲೇಶ್ವರ ಸ್ವಾಮಿಜಿ ನಮ್ಮ ಮನೆಗೆ ಬಂದಿದ್ದರು. ಇದು ಯಾವ ಸಿಸ್ಟ್‍ಂ ಎಂದು ಅವರನ್ನು ಕೇಳಿದೆ. ನೀವು ಯಾವುದೋ ಒಬ್ಬ ವ್ಯಕ್ತಿ ಮೇಲೆ ಪ್ರೀತಿ ಇಟ್ಟುಕೊಂಡು. ಆ ವ್ಯಕ್ತಿಯನ್ನು ಇಳಿಸಿದರೆ ಪಕ್ಷ ಸರ್ವನಾಶ ಆಗುತ್ತೆ ಎಂದು ನಿಮ್ಮ ಬಾಯಲ್ಲಿ ಬಂದರೆ, ಯಾರಿಗೆ ನಾವು ಗೌರವ ಕೊಡೋಣ ಎಂದು ಕೇಳಿದೆ ಎಂದರು.
Advertisement
Advertisement
ಭಾರತೀಯ ಸಂಸ್ಕ್ರತಿಯನ್ನು ಉಳಿಸುತ್ತಿರುವ ಪಕ್ಷ ಬಿಜೆಪಿ ಒಂದೇ. ಪಕ್ಷಕ್ಕೆ ಶಾಪ ಹಾಕುವ ನಿಟ್ಟಿನಲ್ಲಿ ದಯವಿಟ್ಟು ಮಾತನಾಡಬೇಡಿ ಎಂದು ಕಾಲಿಗೆ ಬಿದ್ದು ಪ್ರರ್ಥನೆ ಮಡ್ತೆನೆ. ಯಾವ ಸ್ವಾಮಿಗಳೂ ಯಾವುದೇ ಪಾಠ ಕಲಿಸಲು ಆಗುವುದಿಲ್ಲ, ಬಿಜೆಪಿ ಸುಸಂಘಟಿತವಾಗಿದೆ. ಪ್ರೀತಿಯಿಂದ ನೀವು ಏನು ಬೇಕಾದರೂ ಹೇಳಿ. ನಿಮ್ಮ ಬೆದರಿಕೆಗಳಿಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
Advertisement
ಯತ್ನಾಳ್‍ಗೆ ಕಿವಿಮಾತು:
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಾನೊಬ್ಬ ಸ್ನೇಹಿತನಾಗಿ ಬುದ್ಧಿ ಹೇಳುತ್ತೇನೆ. ಬೇರೆ ಜಿಲ್ಲೆಯವರಿಗೆ ಸ್ವಲ್ಪ ಬುದ್ಧಿ ಇದೆ. ಯತ್ನಾಳ್‍ಗೆ ಬುದ್ಧಿ ಇಲ್ಲ ಎಂದು ನಾನು ಹೇಳಲ್ಲ. ಆದರೆ ಬಹಿರಂಗವಾಗಿ ಹೇಳಿಕೆ ಕೊಟ್ಟು ಅವರೇ ಹಾಳಾಗ್ತಾರೆ. ಬಿಜೆಪಿಯ ಹಿರಿಯ ನಾಯಕರು ಬರುತ್ತಾರೆ. ನಿಮ್ಮದೇನಾದರೂ ಇದ್ದರೆ ಅಲ್ಲಿ ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಳ್ಳಿ. ಬಹಿರಂಗವಾಗಿ ಹೇಳಿಕೆ ಕೊಟ್ಟು ದೊಡ್ಡ ಮನುಷ್ಯನಾಗಲು ಹೊರಟರೆ ಒಳ್ಳೆಯದಲ್ಲ ಎಂದು ಈ ಹಿಂದೆಯೇ ಅವರಿಗೆ ಹೇಳಿದ್ದೆ ಎಂದಿದ್ದಾರೆ.
Advertisement
ಅವರು ನನ್ನ ಆತ್ಮೀಯ ಸ್ನೇಹಿತ, ಹಿಂದುತ್ವವಾದಿ, ನನಗೆ ತುಂಬಾ ಖುಷಿ ಅವರು ಹಿಂದುತ್ವದ ಪರ ಮಾತನಾಡುತ್ತಾರೆ. ಆದರೆ ಬಹಿರಂಗವಾಗಿ ಹೇಳಿಕೆ ಕೊಟ್ಟರೆ ಹೇಗೆ? ಸದ್ಯ ಎಲ್ಲ ಸಮಸ್ಯೆಗಳು ಬಗಿಹರಿದಿವೆ. ಇವರು ಹೇಳಿಕೆ ಕೊಡುವುದರಿಂದ ಮತ್ತೆ ಗೊಂದಲ ಆಗುತ್ತದೆ ಎಂದು ಅನಿಸುತ್ತಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ ಎಂದರು.
ರಾಯಣ್ಣ ಬ್ರಿಗೇಡ್‍ನ್ನು ನಿಲ್ಲಿಸಬೇಕು ಎಂದು ಅಮಿತ್ ಶಾ ಅವರು ದೆಹಲಿಗೆ ಕರೆದು ಹೇಳಿದರು. ಎಲ್ಲರೂ ಸೇರಿ ಕ್ಲೋಸ್ ಅಂದ್ರು, ಅವತ್ತೆ ಮುಗಿಸಾಯ್ತು, ನನ್ನ ಜೀವನದಲ್ಲಿ ಮತ್ತೆ ಆ ಕಡೆ ತಿರುಗಿ ನೋಡಲ್ಲ ಎಂದರು.
ಸಿದ್ದರಾಮಯ್ಯನವರ ಅಪ್ಪ ಯಾರು?
ಕಾಂಗ್ರೆಸ್ ನ ಮೂಲ ಕಾರ್ಯಕರ್ತರಿಂದ ಪಕ್ಷದಲ್ಲಿ ಗೊಂದಲ ಇಲ್ಲ. ಹೊರಗಿನಿಂದ ಬಂದವರು ಗೊಂದಲ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಈ ಮೂಲಕ ನೇರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಹೌದು ನಾನು ಹೊರಗಿನಿಂದ ಬಂದೆ, ಕಾಂಗ್ರೆಸ್ ಸೊಸೆಯಾಗಿ ನಾನು ಬೀಗ ಹಿಡಿದುಕೊಂಡೆ ಎಂದು ಹೇಳಿದರು. ಚಾಮುಂಡೇಶ್ವರಿಯಲ್ಲಿ ಸೋತಾಗ ಕಾಂಗ್ರೆಸ್‍ನ ಮಗ ನಾನು ಎಂದು ಹೇಳಿದ್ದರು. ಬಾದಾಮಿಗೆ ಬರುತ್ತಿದ್ದಂತೆ ಮತ್ತೆ ಇಲ್ಲಿಯ ಮಗ ಎಂದರು. ಚಾಮರಾಜಪೇಟೆಗೆ ಹೋದಾಗ ಮತ್ತೆ ಅಲ್ಲಿನ ಮಗ ಎಂದರು. ಯಾವ ಪಕ್ಷದಲ್ಲಿದ್ದೀರಿ ನೀವು ಎಂದು ಈಶ್ವರಪ್ಪ ಪ್ರಶ್ನಿಸಿದರು.
ಮಗ ಅಂತಾರೆ ಒಪ್ಪಿಕೊಳ್ಳೋಣ, ಈಗ ಕಾಂಗ್ರೆಸ್ ನಲ್ಲಿದ್ದೀರಿ, ಹಿಂದೆ ಜೆಡಿಎಸ್, ಎಬಿಪಿಜೆಡಿ ನಲ್ಲಿದ್ದಿರಿ. ಮೂರು ಪಾರ್ಟಿಯ ಮಗನಾ ನೀವು? ಹಾಗಾದ್ರೆ ನಿಮ್ಮ ಅಪ್ಪ ಯಾರು ಎಂದು ಸಿದ್ದರಾಮಯ್ಯನವರ ವಿರುದ್ಧ ವ್ಯಂಗ್ಯವಾಡಿದರು.