ಬೆಂಗಳೂರು: ಇನ್ನು ಸ್ವಲ್ಪ ಹೊತ್ತಿನಲ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಲಾಕ್ ಡೌನ್ ಘೋಷಣೆ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸುಳಿವು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲಾಕ್ ಡೌನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಕೆಲವೇ ಗಂಟೆಗಳಲ್ಲಿ ಸಿಎಂ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಕೊಡ್ತಾರೆ. ಸಿಎಂ ಅವರು ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ತಜ್ಞರು, ಜನರ ಮನಸ್ಥಿತಿ ಅನುಗುಣವಾಗಿ ಸಿಎಂ ನಿರ್ಧಾರ ಮಾಡ್ತಾರೆ. ಸಿಎಂ ಕೆಲವೇ ಗಂಟೆಗಳಲ್ಲಿ ಇದನ್ನ ಘೋಷಣೆ ಮಾಡ್ತಾರೆ ಎಂದರು.
Advertisement
Advertisement
ಆಸ್ಪತ್ರೆಗಳ ನಿರ್ವಹಣೆ ವಿಚಾರ ಚರ್ಚೆ ಆಗಿದೆ. ಸಮಿತಿ ಕೊಟ್ಟ ಸಲಹೆಗಳನ್ನ ಅನುಷ್ಠಾನ ಮಾಡಲು ಇವತ್ತು ಸಭೆ ಮಾಡಿದ್ದೇವೆ. ಆಸ್ಪತ್ರೆಗಳಲ್ಲಿ ಸರ್ಕಾರದ ಕೋಟಾದಲ್ಲಿ ಅಡ್ಮಿಟ್ ಆಗಿರೋರು ಗುಣ ಆದ ಕೂಡಲೇ ಕೇರ್ ಸೆಂಟರ್ ಮತ್ತು ಸ್ಟೆಪ್ ಡೌನ್ ಆಸ್ಪತ್ರೆಗೆ ಸೇರಿಸಬೇಕು ಅಂತ ನಿರ್ಣಯ ಆಗಿದೆ. ಆಸ್ಪತ್ರೆಗೆ ಅವಶ್ಯಕತೆ ಇಲ್ಲದೆ ಹೋದ್ರೆ ಆಸ್ಪತ್ರೆಗೆ ಸೇರಲಾಗುತ್ತಿದೆ. ಶೇ.90 ಸ್ಯಾಚ್ಯರೇಷನ್ ಕಡಿಮೆ ಇರೋರು ಆಡ್ಮಿಟ್ ಆಗಬೇಕು. ಹೀಗಾಗಿ ಮನೆಯಲ್ಲಿ ಟೆಸ್ಟ್ ಮಾಡುವ ಕೆಲಸ ಮಾಡಲು ಕ್ರಮವಹಿಸಲಾಗಿದೆ. ಅಗತ್ಯ ಇರೋರಿಗೆ ಮಾತ್ರ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಲಾಗುತ್ತೆ ಎಂದು ತಿಳಿಸಿದರು.
Advertisement
Advertisement
ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಸಲುವಾಗಿ ಮಾನಿಟರ್ ಮಾಡುವ ಕೆಲಸ ಮಾಡಲಾಗುತ್ತೆ. ಇದಕ್ಕೆ ಸಂಬಂಧಿಸಿದಂತೆ ಆಡಿಟ್ ರಿಪೋರ್ಟ್ ತಯಾರು ಮಾಡುವ ಕೆಲಸ ಮಾಡಲಾಗ್ತಿದೆ. ಸಾವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಆಡಿಟ್ ಮಾಡಿ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ತೀವಿ. ಮನೆಯಲ್ಲಿ ಇರೋ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕ್ರಮಗಳ ತೆಗೆದುಕೊಳ್ಳಲಾಗುತ್ತೆ. ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡ್ತೀವಿ. ರಕ್ತ ಪರೀಕ್ಷೆಗಳು ಪ್ರಾಥಮಿಕ ಕೇಂದ್ರದಲ್ಲಿ ಮಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ತಿದ್ದೇವೆ ಎಂದು ಹೇಳಿದರು.
2.62 ಲಕ್ಷ ರೆಮಿಡಿಸಿವರ್ ಡೊಸ್ ನಮಗೆ ಅಲರ್ಟ್ ಆಗಿದೆ. 7 ದಿನಕ್ಕೆ ಅಲರ್ಟ್ ಆಗಿದೆ. ದಿನಕ್ಕೆ 30 ಸಾವಿರ ಡೋಸ್ ಸಿಗುತ್ತೆ. ಬೇಡಿಕೆಗೆ ಅನುಗುಣವಾಗಿ ರೆಮಿಡಿಸಿವರ್ ಉತ್ಪಾದನೆ ಮಾಡಲಾಗ್ತಿದೆ. ರೆಮಿಡಿಸಿವರ್ ಕೊರತೆ ನಮಗೆ ಇಲ್ಲ. ಅನವಶ್ಯಕವಾಗಿ ರೆಮಿಡಿಸಿವರ್ ಕೊಡಬಾರದು. ಗೈಡ್ ಲೈನ್ಸ್ ಪ್ರಕಾರ ರೆಮಿಡಿಸಿವರ್ ಕೊಡಬೇಕು. ಇವತ್ತಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಆಕ್ಸಿಜನ್ ಕೂಡಾ ಸಮರ್ಪಕವಾಗಿ ಪೂರೈಕೆ ಆಗ್ತಿದೆ. 50 ಸಾವಿರ ಜನರಿಗೆ ಆಗುವಷ್ಟು ಆಕ್ಸಿಜನ್ ಇದೆ. 1200 ಒಖಿ ನಮಗೆ ಅಲರ್ಟ್ ಆಗಿದೆ. ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತೆ ಎಂದರು.